ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಮಾರ್ ಹೆಸರು ಅಕ್ರಮ ಹಣ ವರ್ಗಾವಣೆ ಪ್ರಕರಣದ ಜೊತೆ ತಳುಕು ಹಾಕಿಕೊಂಡಿದೆ. ನಿನ್ನೆ ಇಡಿ ಅಧಿಕಾರಿಗಳು ರಾಜ್ ಕುಮಾರ ಅವರ ಮನೆ ಹಾಗೂ ಆಫೀಸ್ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ ಕುಂದ್ರಾ, ತಮ್ಮ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂಬುದು ಮುಂದೊಂದು ದಿನ ಸಾಬೀತಾಗುತ್ತದೆ, ಈ ಪ್ರಕರಣದಲ್ಲಿ ಪತ್ನಿ ಹೆಸರನ್ನು ಎಳೆದು ತರಬೇಡಿ ಎಂದು ಕೋರಿದ್ದಾರೆ.
‘ಇದು ಯಾರಿಗೆಲ್ಲ ಸಂಬಂಧಿಸಿದೆಯೋ ಅವರಿಗೆ ನೇರವಾಗಿ ಹೇಳುತ್ತಿದ್ದೇನೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ತನಿಖೆಗೆ ನಾನು ಸಹಕರಿಸುತ್ತಿದ್ದೇನೆ. ಹಣ ವರ್ಗಾವಣೆ, ಅಶ್ಲೀಲ ಸಿನಿಮಾ ನಿರ್ಮಾಣ ಮತ್ತಿತ್ಯಾದಿ ಪ್ರಕರಣಗಳನ್ನು ಇದು ಒಳಗೊಂಡಿದೆ. ಯಾವುದನ್ನು ಸೆನ್ಸೇಷನ್ ಮಾಡಿದರೂ ಸತ್ಯ ಮರೆ ಆಗುವುದಿಲ್ಲ. ಕೊನೆಯಲ್ಲಿ ಸತ್ಯ ಹೊರಬರಲೇಬೇಕು’ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನು ಕೂಡ ಎಳೆದು ತರಲಾಗುತ್ತಿದೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರದ ಬಗ್ಗೆ ಹೇಳಲಾಗುತ್ತಿದೆ. ಇದಕ್ಕೆ ರಾಜ್ಕುಂದ್ರಾ ಸಿಟ್ಟಾಗಿದ್ದಾರೆ. ‘ಸಂಬಂಧಿಸದೇ ಇಲ್ಲದ ವಿಚಾರಗಳಲ್ಲಿ ನನ್ನ ಪತ್ನಿಯ ಹೆಸರನ್ನು ಎಳೆದು ತರಬೇಡಿ’ ಎಂದು ಅವರು ಕೋರಿಕೊಂಡಿದ್ದಾರೆ.
ರಾಜ್ ಕುಂದ್ರಾ ಅವರು ಸಾಕಷ್ಟು ಕೇಸ್ಗಳನ್ನು ಎದುರಿಸುತ್ತಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಅತಿ ದೊಡ್ಡ ಬಿಟ್ ಕಾಯಿನ್ ಹಗರಣದಲ್ಲೂ ಅವರ ಹೆಸರು ಸಿಲುಕಿದೆ. ನೂರಾರು ಕೋಟಿ ರೂಪಾಯಿ ಒಡೆಯನಾಗಿರೋ ರಾಜ್ ಕುಂದ್ರಾ ಈ ರೀತಿಯ ವಿಚಾರಗಳಿಂದ ಸುದ್ದಿಯಲ್ಲಿ ಇದ್ದಾರೆ.