ಬೆಂಗಳೂರು: ರಾಜ್ಯಕ್ಕೆ ಮುಂಗಾರು ಕಾಲಿಡುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಇದರಿಂದ ಕುಡಿಯುವ ನೀರಿಗು ಹಾಹಾಕಾರ ಉದ್ಭವಿಸಿದೆ.
ದಿನೇದಿನೇ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ನಿನ್ನೆ (ಜೂ.23) 78 ಅಡಿ ಇದ್ದ ಜಲಾಶಯದ ನೀರಿನಮಟ್ಟ ಇಂದು (ಜೂ.24) 77 ಅಡಿಗೆ ಬಂದು ತಲುಪಿದೆ. ನೀರಿನ ಮಟ್ಟ ಕುಸಿತ ಹಿನ್ನೆಲೆ ಬೆಳೆಗಳಿಗೆ ನೀರಿಲ್ಲ. ಜು.2ನೇ ವಾರವರೆಗೆ ಕುಡಿಯಲು ಬಳಕೆಯಾಗುವಷ್ಟು ಮಾತ್ರ ನೀರು ಇದೆ. 124 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 77.005 ಅಡಿಯಷ್ಟೇ ನೀರು ಇದೆ. ಸದ್ಯ 514 ಕ್ಯೂಸೆಕ್ ಒಳಹರಿವು, 834 ಕ್ಯೂಸೆಕ್ ಹೊರ ಹರಿವು.

