ಬೆಂಗಳೂರು: ಆಚಾರ್ಯ ಚಾಣಕ್ಯ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಅರ್ಥಶಾಸ್ತ್ರ ಸೇರಿದಂತೆ ಅನೇಕ ನೀತಿಶಾಸ್ತ್ರಗಳನ್ನು ಬರೆದಿದ್ದಾರೆ. ಚಾಣಕ್ಯನ ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಅನೇಕ ಸಮಸ್ಯೆಗಳನ್ನು ಮತ್ತು ಸಂಕಟಗಳನ್ನು ತೊಡೆದುಹಾಕಬಹುದು.
ಅದೇ ರೀತಿ ದಷ್ಟು ಬೇಗ ಜೀವನದಲ್ಲಿ ಯಶಸ್ಸು ಕಾಣಲು ಬಯಸುವವರು ಆಚಾರ್ಯ ಚಾಣಕ್ಯ ಹೇಳಿದ ಸೂಚನೆಗಳನ್ನು ಪಾಲಿಸಿದರೆ ಸಾಕು. ಯಶಸ್ಸು ಅವರಿಗೆ ಒಲಿದು ಬರುತ್ತದೆ. ಹಲವು ಶಾಸ್ತ್ರಗಳಲ್ಲಿ ಪ್ರವೀಣರಾಗಿರುವ ಆಚಾರ್ಯ ಚಾಣಕ್ಯರು ಯಶಸ್ಸಿಗೆ ನೀಡಿದ ಸೂಚನೆಗಳೇನು ಎಂಬುದರ ಮಾಹಿತಿ ಇಲ್ಲಿದೆ.
ಅರ್ಥಪೂರ್ಣ ವಹಿವಾಟುಗಳು: ನಿಮ್ಮ ಬಳಿ ಹಣವಿದ್ದರೆ, ಅದನ್ನು ದೊಡ್ಡ ವಿಷಯಗಳಲ್ಲಿ ಮಾತ್ರ ಬಳಸುವುದು ಉತ್ತಮ. ಏಕೆಂದರೆ ವ್ಯರ್ಥ ಖರ್ಚು ನಿಮ್ಮ ಹಣವನ್ನು ನಾಶಪಡಿಸುವುದಲ್ಲದೆ ಅದನ್ನು ಬೆಳೆಸುವುದಿಲ್ಲ. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಬಳಸುವುದು, ಅಂದರೆ ಇತರರಿಗೆ ಸಹಾಯ ಮಾಡುವುದು ಸಹ ನಿಮ್ಮ ಅಭಿವೃದ್ಧಿಗೆ ಸೋಪಾನವಾಗಬಹುದು ಎಂದು ಚಾಣಕ್ಯ ಹೇಳಿದ್ದಾರೆ.
ವಿನಯ: ಮೊದಲು ಎಲ್ಲರೂ ಹೇಳುವುದನ್ನು ಆಲಿಸಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಂತರ ವೈಯಕ್ತಿಕ ಅರಿವಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಆಚಾರ್ಯರು ಹೇಳಿದ್ದಾರೆ. ಇತರರ ಮಾತನ್ನು ತಳ್ಳಿಹಾಕಬೇಡಿ, ಅದು ನಾಲ್ವರ ನಡುವೆ ನಮ್ಮ ಮೌಲ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.
ಪ್ರಾಮಾಣಿಕತೆ: ನೀವು ಮಾಡುವ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿಲ್ಲದಿದ್ದರೆ, ನೀವು ಅದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ತಪ್ಪು ದಾರಿಯಲ್ಲಿ ಹಣ ಗಳಿಸುವುದು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಕೆಲಸವನ್ನು ಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಮಾಡುವುದು ಯಾವಾಗಲೂ ಉತ್ತಮ. ಹೀಗೆ ಮಾಡುವುದರಿಂದ ನೀವು ಶಾಶ್ವತವಾದ ಯಶಸ್ಸನ್ನು ಹೊಂದುವಿರಿ.
ಕಷ್ಟವೇ ಭಾಗ್ಯ: ಆಚಾರ್ಯ ಚಾಣಕ್ಯನ ಪ್ರಕಾರ, ಪರಿಶ್ರಮ ಪಡುವವರು ಎಲ್ಲಿ ಬೇಕಾದರೂ ಯಶಸ್ಸು ಸಾಧಿಸಬಹುದು. ಏಕೆಂದರೆ ಸೋಮಾರಿಗಳು ಯಾವಾಗಲೂ ತಮ್ಮ ವೈಫಲ್ಯವನ್ನು ವಿಧಿಯ ಮೇಲೆ ದೂಷಿಸುತ್ತಾರೆ. ಆದರೆ ಶ್ರಮಜೀವಿಗಳು ತಮ್ಮ ಭವಿಷ್ಯವನ್ನು ಬರೆಯುತ್ತಾರೆ. ಅಂತಹವರು ವಿಜೇತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ.