ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಇಂತಹದೇ ಘಟನೆಗಳು ನಡೆಯುತ್ತಲೇ ಬಂದಿದೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಗಂಡನಿಗೆ, ಪತ್ನಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Garuda Purana: ಮನೆಯಲ್ಲಿ ನಡೆಯುವ ಜಗಳಗಳಿಗೆ ಇವುಗಳೇ ಕಾರಣ.! ಗರುಡ ಪುರಾಣ ಏನು ಹೇಳುತ್ತದೆ ಗೊತ್ತಾ?
ಟೆಕ್ಕಿ ಶ್ರೀಕಾಂತ್ ಹಾಗೂ ಯುವತಿ 2022 ರಲ್ಲಿ ಮದುವೆ ಆಗಿದ್ದಾರೆ. ಮದ್ವೆ ಆದ್ಮೇಲೆ ಒಂದು ದಿನವೂ ಗಂಡನೊಂದಿಗೆ ನೆಟ್ಟಗೆ ಸಂಸಾರ ಮಾಡಿಲ್ಲವಂತೆ ಈ ಮಹಿಳೆ. ಮಕ್ಕಳು ಮಾಡಿಕೊಳ್ಳೊಣ ಅಂತ ಗಂಡ ಶ್ರೀಕಾಂತ್ ಕೇಳಿದರೆ ಈಗ ಮಕ್ಕಳು ಬೇಡ ನಮಗೆ 60 ವರ್ಷವಾದ ಬಳಿಕ ಮಕ್ಕಳು ಮಾಡಿಕೊಳ್ಳೊಣ ಎನ್ನುತ್ತಾಳೆ, ಮುಟ್ಟಲು ಹೋದ್ರೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬ್ಲಾಕ್ ಮೇಲ್ ಮಾಡುತ್ತಾಳೆ ಪತಿ ಆರೋಪಿಸಿದ್ದಾರೆ.
ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ನೀಡುವಂತೆ ಬೇಡಿಕೆ ಜೊತೆಗೆ ಮಕ್ಕಳು ಬೇಡ ಎಂದು ಪತ್ನಿ ತನಗೆ ಕಿರುಕುಳ ಕೊಡುತ್ತಿರುವುದಾಗಿ ಆರೋಪಿಸಿ ಪತಿ ಶ್ರೀಕಾಂತ್ ಎನ್ನುವರು ಪತ್ನಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದು, ಇದೀಗ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂದ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇನ್ನು ಶ್ರೀಕಾಂತ್ ತನಗಾದ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.