ಬೆಂಗಳೂರು:- ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತದೆ ಅಂದುಕೊಳ್ಳುವುದು ಭ್ರಮೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಬಳಕೆ ಕಾರಣ ಅನ್ನೋದು ಅಧಿಕೃತವಾಗಿಲ್ಲ: ದಿನೇಶ್ ಗುಂಡೂರಾವ್!
ಈ ಸಂಬಂಧ ದೆಹಲಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ಹೈಕಮಾಂಡ್ ನ ಬೇಟಿ ಮಾಡಿದ್ದೆ. ರಾಜ್ಯದ ರಾಜಕೀಯ ಬೆಳವಣಿಗೆ ಮತ್ತು ಉಪ ಚುನಾವಣೆ ಬಗ್ಗೆ ವರಿಷ್ಟರಿಗೆ ವಿವರಿಸಿದ್ದೇನೆ. ಕಾರ್ಯಕರ್ತರು ನನ್ನ ಮೇಲೆ ಸಾಕಷ್ಟು ಅಪೇಕ್ಷೆ ಇಟ್ಟುಕೊಂಡಿದ್ದಾರೆ.
ಒಂದು ದಿನ ಎರಡು ದಿನ ಸರಿ ದಿನ ಬೆಳಗದ್ರೆ ಯಡಿಯೂರಪ್ಪರನ್ನ ಟೀಕೆ ಮಾಡುವುದು. ರಾಜ್ಯದ ಅಧ್ಯಕ್ಷರನ್ನ ಟೀಕೆ ಮಾಡುತ್ತಲೆ ಇರುವುದರಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ನಡವಳಿಕೆಯಿಂದ ಯಡಿಯೂರಪ್ಪರನ್ನ ಬೈಯುವುದರಿಂದ ಅತಿ ಎತ್ತರಕ್ಕೆ ಬೆಳೆಯಬಹುದು ಅಂದುಕೊಂಡಿದ್ರೆ ಅದು ಸಾಧ್ಯವಿಲ್ಲ. ಕಾರ್ಯಕರ್ತರು ಸಹ ಇದರ ಬಗ್ಗೆ ಇಡಿ ಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಇತಿ ಶ್ರೀ ಹಾಡಬೇಕು ಅಂತ ಕಾರ್ಯಕರ್ತರಲ್ಲು ಅಪೇಕ್ಷೆ ಇದೆ. ಈ ಎಲ್ಲದರ ಬಗ್ಗೆ ಯಾರ ಗಮನಕ್ಕೆ ತರಬೇಕೋ ಅವರ ಗಮನಕ್ಕೆ ತಂದಿದ್ದೇನೆ. ಇವತ್ತು ವಿಜಯೇಂದ್ರ ಏನು ಮಾತನಾಡ್ತಿಲ್ಲ ಅದು ನನ್ನ ಅಸಮರ್ಥನೆ ಅಂದರೆ ಅದು ತಪ್ಪಾಗುತ್ತದೆ. ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತದೆ ಅಂದುಕೊಳ್ಳುವುದು ಭ್ರಮೆ.
ರಾಜ್ಯದಲ್ಲಿ ಯಡಿಯೂರಪ್ಪ ಕೊಡುಗೆ ಏನು. ಮೂರು ನಾಲ್ಕು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ರು. ಅದಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಇದು ಖಂಡಿತ ಅಕ್ಷಮ್ಯ ಅಪರಾದ. ದಿನಬೆಳಗಾದ್ರೆ ನಮ್ಮ ಬಗ್ಗೆ ಮಾತನಾಡಿದ್ರೆ ಅಧ್ಯಕ್ಷರ ಬದಲಾವಣೆ ಆಗುತ್ತೆ ಅನ್ನೂ ಭ್ರಮೆಯಲ್ಲಿದ್ರೆ ಅವರ ಆಸೆ ಈಡೇರಲ್ಲ. ನಾನು ನನ್ನ ತಾಳ್ಮೆಯನ್ನ ಇಟ್ಟುಕೊಂಡು ನನ್ನ ಜವಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದೇನೆ.
ಹೇಳಿಕೆ ನೀಡುವವರ ಬಾಯಿ ಮುಚ್ಚಿಸುವ ಶಕ್ತಿ ನನಗೆ ಇಲ್ಲ ಆದ್ರೆ ಕಾರ್ಯಕರ್ತರಿಗೆ ಇದೆ. ಹೈಕಮಾಂಡ್ ಸಹ ಇದೆಲ್ಲವನ್ನು ಗಮನಿಸುತ್ತಿದೆ. ಪಕ್ಷದ ವರಿಷ್ಟರಿಗೆ ನನ್ನ ಕೆಲಸದ ಬಗ್ಗೆ ಸಮಾಧಾನವಿದೆ. ಯಡಿಯೂರಪ್ಪ ಅವರ ಮಗ ಆಗಿರುವುದೆ ಅಪರಾಧ ಅನ್ನೋ ರೀತಿ ಕೆಲವರು ಮಾತನಾಡ್ತಿದ್ದಾರೆ.
ಮುಂದಿನ ದಿನಗಳಲ್ಲಿ ಅದಕ್ಕೆ ನಾನು ಸರಿಯಾದ ಉತ್ತರ ಕೊಡ್ತೀನಿ. ನಾನು ಅವರನ್ನ ಉಚ್ಚಾಟನೆ ಮಾಡಿ ಅಂತ ದೆಹಲಿಯಲ್ಲಿ ದೂರು ನೀಡಿಲ್ಲ ಎಂದು ಯತ್ನಾಳ ವಿರುದ್ದ ಬಿ.ವೈ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.