ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗದಲ್ಲಿ ಕುರಿ, ಮೇಕೆ ಸಾಕಾಣಿಕೆ ಒಂದು ಮುಖ್ಯವಾದ ಆದಾಯ ತರುವ ಕಸುಬಾಗಿದೆ. ಸಾಮಾನ್ಯವಾಗಿ ಆಡು ಸಾಕಾಣಿಕೆ ಕಸುಬನ್ನು ಭೂರಹಿತ, ಹಿಂದುಳಿದ ವರ್ಗದವರು ಮತ್ತು ಬಡ ಕೃಷಿಕರು ಸಾಕಣೆ ಮಾಡುವುದನ್ನು ಕಾಣುತ್ತೇವೆ. ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿ ಸಾಕಣೆ ಪ್ರದೇಶವಾಗಿ ಗಮನಸೆಳೆಯುತ್ತದೆ. ನೀವು ಕುರಿಗಳ ಫಾರಂ ಗಳನ್ನು ಮಾಡುವ ಮೂಲಕ ಒಂದು ಫಾರಂ ನಲ್ಲಿ ನೂರಕ್ಕಿಂತ ಹೆಚ್ಚು ಕುರಿಗಳನ್ನು ಸಾಕಣೆ ಮಾಡಿ ಪೋಷಣೆ ಮಾಡಬಹುದಾಗಿದೆ.
ಇನ್ನು ನೀವು ಕೃಷಿ ಮಾಡ್ತಾ ಇದ್ದರೆ ಆಹಾರ ವೆಚ್ಚವು ಕಡಿಮೆಯೇ, ಕುರಿಗಳ ಆಹಾರದಲ್ಲಿ ಅವುಗಳಿಗೆ ಬೇಕಾದ ಸೊಪ್ಪುಗಳು ಕೂಡ ನೀಡುವುದರಿಂದ ಕುರಿಗಳು ಬಲಿಷ್ಠ ವಾಗಿ ಬೆಳೆಯುತ್ತದೆ. ಇನ್ನು ಕುರಿಗಳನ್ನು ಸಾಕುವಾಗ ಹೈಬ್ರಿಡ್ ತಳಿ ಅಥವಾ ಕುಳ್ಳ ಜಾತಿ ಅಂತಹ ಕುರಿಗಳನ್ನು ನೀವು ಸಾಕಣೆ ಮಾಡಿದ್ರೆ ಉತ್ತಮ ಬೇಡಿಕೆಯು ಕೂಡ ಇರಲಿದೆ. ಅದೇ ರೀತಿ ಇಂದು ಸರ್ಕಾರವು ಕೂಡ ಕುರಿ ಸಾಕಾಣಿಕೆಯಲ್ಲಿ ತೊಡಗಿ ಕೊಂಡಿರುವ ರೈತರಿಗೆ ವಿವಿಧ ರೀತಿಯ ಪ್ರೋತ್ಸಾಹದ ಬೆಂಬಲಗಳನ್ನೂ ಸಹ ನೀಡುತ್ತಿದೆ.
ಹೌದು ನೀವು ಸ್ವ ಉದ್ಯಮ ಮಾಡುದಾದ್ರೆ ಕುರಿ ಸಾಕಾಣಿಕೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಇದಕ್ಕೆ ವಿಧಿಸಬೇಕಾದ ವೆಚ್ಚವು ಕೂಡ ಕಡಿಮೆ ಇರಲಿದ್ದು, ಈ ಬ್ಯುಸಿನೆಸ್ ಮಾಡಿದ್ರೆ ತಿಂಗಳಿಗೆ ಕನಿಷ್ಟ 1 ಲಕ್ಷ ಆದಾಯ ಪಡೆಯಬಹುದಾಗಿದೆ. ಇವುಗಳ ಸಾಕಾಣಿಕೆ ಮಾಡಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ, ಪೋಷಣೆ ಮಾಡಲು ಕಡಿಮೆ ವೆಚ್ಚದಲ್ಲಿ ಕುರಿ ಸಾಕಣೆ ಮಾಡಬಹುದಾಗಿದೆ.
ಆಡು ಸಾಕಾಣಿಕೆಯನ್ನು ಒಂದು ಮುಖ್ಯ ಇಲ್ಲವೇ ಉಪಕಸುಬನ್ನಾಗಿ ರೈತರು, ಭೂಹೀನರು, ರೈತ ಕಾರ್ಮಿಕರು ಗ್ರಾಮೀಣ ನಿರುದ್ಯೋಗಿ ಯುವಕರು ಇಲ್ಲವೇ ಇತರ ಉದ್ಯೋಗಸ್ಥರು ಅಳವಡಿಸಿಕೊಳ್ಳಬಹುದು. ಆಡು ಸಾಕಾಣಿಕೆಗೆ ಹೆಚ್ಚು ಹಣ ತೊಡಗಿಸಬೇಕಾಗಿಲ್ಲ. ಆಡುಗಳನ್ನು ಸಾಕಲು ಹೆಚ್ಚು ವೆಚ್ಚದ ಕಟ್ಟಡ ಮತ್ತು ಸಲಕರಣೆಗಳು ಬೇಕಾಗಿಲ್ಲ. ಆಡುಗಳು 15 ರಿಂದ 17 ತಿಂಗಳ ವಯಸ್ಸಿನಲ್ಲಿ ಹಾಲು ಕೊಡಲು ಪ್ರಾರಂಭಿಸುತ್ತವೆ.