ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳನ್ನು ಕಾಣಬಹುದಾಗದೆ. ಅಂತಹ ಪದಾರ್ಥಗಳಲ್ಲಿ ಒಂದು ಹಿಪ್ಪಲಿ ಅಥವಾ ಪಿಪ್ಪಲಿ. ಆಯುರ್ವೇದದಲ್ಲಿ ಇದರ ಬಳಕೆಯನ್ನು ಹೆಚ್ಚು ಕಾಣಬಹುದಾಗಿದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಿನ ರೀತಿಯಲ್ಲಿ ಇದು ನೆರವಾಗುತ್ತದೆ.
ಹಿಪ್ಪಲಿ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಇದರ ಸಸ್ಯವು ವೀಳ್ಯೆದೆಲೆ ರೀತಿಯಲ್ಲಿ ಎಲೆಗಳನ್ನು ಹೊಂದಿದ್ದು, ಮೆಣಸಿನ ಬಳ್ಳಿಯಂತೆ ಹಬ್ಬುತ್ತದೆ. ಹಿಪ್ಪಲಿಯ ಆರೋಗ್ಯ ಗುಣ ತಿಳಿದರೆ ನೀವು ಕೂಡ ಮನೆಯಲ್ಲಿ ತಂದಿಟ್ಟುಕೊಳ್ಳುತ್ತೀರಿ. ಹಾಗಾದರೆ ಹಿಪ್ಪಲಿ ಯಾವೆಲ್ಲ ರೀತಿಯ ಅನಾರೋಗ್ಯಕ್ಕೆ ರಾಮಬಾಣದಂತೆ ಕೆಲಸಮಾಡುತ್ತದೆ. ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
- ಎರಡು ಚಮಚ ಹಿಪ್ಪಲಿ ಚೂರ್ಣ ಹಾಗೂ ಒಂದು ಚಮಚ ತ್ರಿಫಲ ಚೂರ್ಣವನ್ನು ಬಿಸಿ ನೀರಿಗೆ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.
- ಸಂಧಿವಾತ, ಸೊಂಟನೋವಿಗೂ ಸಮಸ್ಯೆಗೆ ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ ಹಾಗೂ ಉಪ್ಪನ್ನು ಮಜ್ಜಿಗೆಯಲ್ಲಿ ಸೇರಿಸಿ ಸೇವನೆ ಮಾಡಿದರೆ ಪರಿಣಾಮಕಾರಿಯಾಗಿದೆ.
- ಹಿಪ್ಪಲಿ ಮತ್ತು ಶುಂಠಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಕಷಾಯ ತಯಾರಿಸಿ ಎರಡು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಿದರೆ ಜ್ವರವು ಗುಣಮುಖವಾಗುತ್ತದೆ.
- ಹಿಪ್ಪಲಿ ಪುಡಿ, ಕಾಳು ಮೆಣಸಿನ ಪುಡಿ, ಜೇಷ್ಠ ಮಧುವಿನ ಪುಡಿ ಸಮ ಪ್ರಮಾಣದಲ್ಲಿ ಬೆರೆಸಿ, ಅರ್ಧ ಚಮಚದಷ್ಟು ವೀಳ್ಯದೆಲೆರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿದರೆ ಅಸ್ತಮಾವು ಕಡಿಮೆಯಾಗುತ್ತದೆ.
- ಒಂದು ಚಮಚ ಹಿಪ್ಪಲಿ ಪುಡಿಯನ್ನು ತುಪ್ಪ ಮತ್ತು ಜೇನುತುಪ್ಪದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ಸೇವಿಸಿದರೆ ಬಾಯಿಯ ದುರ್ವಾಸನೆಯೂ ದೂರರಾಗುತ್ತದೆ.
- ಹಿಪ್ಪಲಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
- ಹಿಪ್ಪಲಿಯ ಪುಡಿಯನ್ನು ಗೋಮೂತ್ರದಲ್ಲಿ ಬೆರೆಸಿ, ಪ್ರತಿನಿತ್ಯವು ಸೇವಿಸುವುದರಿಂದ ಸಂಧಿವಾತವು ಶಮನವಾಗುತ್ತದೆ.
- ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ ಉಪ್ಪನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿದರೆ ಮೂಲವ್ಯಾಧಿಗೆ ಪರಿಣಾಮಕಾರಿ ಔಷಧವಾಗಿದೆ.
- ಎರಡು ಚಿಟಿಕೆ ಹಿಪ್ಪಲಿ ಪುಡಿ ಹಾಗೂ ಒಂದು ಚಮಚ ಹಸಿ ಶುಂಠಿಯವನ್ನು ಮಿಶ್ರಣ ಮಾಡಿ ಸೇವಿಸಿದರೆ ಕಡಿಮೆ ರಕ್ತದೊತ್ತಡ ಸಮಸ್ಯೆ ದೂರವಾಗುತ್ತದೆ.
- ಕೂದಲು ಉದುರು ಸಮಸ್ಯೆಯಿದ್ದಲ್ಲಿ ಹಿಪ್ಪಲಿಯ ಚೂರ್ಣವನ್ನು ಬೇವಿನ ಎಲೆ ಹಾಗೂ ಹಾಲಿನಲ್ಲಿ ಅರೆದು ಕೂದಲಿಗೆ ಲೇಪಿಸಿ ಒಣಗಿದ ಬಳಿಕ ಸ್ನಾನ ಮಾಡಿದರೆ ಉತ್ತಮ.
- ಲಿಂಬೆರಸ ಮತ್ತು ಗಂಧದೆಣ್ಣೆಯೊಂದಿಗೆ ಹಿಪ್ಪಲಿಯ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಸೋರಿಯಾಸಿಸ್, ಚರ್ಮದ ಉರಿಯೂತ ಸೇರಿದಂತೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.