ಹಳೆಯ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ಕೆಡವಿ ದೇವಸ್ಥಾನದ ಜಾಗ ಹಾಗೂ ಕೋಟೆ ಜಾಗ ಒತ್ತುವರಿ ಆರೋಪ ಹಿನ್ನೆಲೆ ಘಟನಾ ಸ್ಥಳವಾದ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಗ್ರಾಮಕ್ಕೆ ಸಂಸದ ಮುನಿಸ್ವಾಮಿ ಭೇಟಿ ನೀಡಿದ್ದಾರೆ.
ಸುಮಾರು 11 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಹಣ ನೀಡಿದ್ರೆ ದೇವಸ್ತಾನದ ಜಾಗವನ್ನೇ ಖಾತೆ ಮಾಡಿಕೊಡ್ತೀರಾ ? ದೇವಸ್ತಾನದ ಜಾಗ ಹದ್ದುಬಸ್ತು ಮಾಡದೆ ಹೋದ್ರೆ ಸುಮ್ಮನಿರೊಲ್ಲ ಎಂದು ರಾಯಲ್ಪಾಡು ಹೋಬಳಿಯ ರಾಜಸ್ವ ನಿರೀಕ್ಷಕ ಗುರು ಅವರಿಗೆ ಸಂಸದ ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.