ಬೆಂಗಳೂರು: ಶನಿವಾರದ ದಿನವನ್ನು ಹಿಂದೂ ಧರ್ಮದ ದೇವರಾದ ಸೂರ್ಯನ ಮಗನಾದ ಶನಿ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಶನಿಯು ಯಾವುದೇ ವ್ಯಕ್ತಿಯನ್ನು ಆತನ ಕಾರ್ಯಗಳಿಂದ ರಾಜನನ್ನಾಗಿ ಅಥವಾ ಕಡು ಬಡವನನ್ನಾಗಿಯೂ ಮಾಡಬಹುದು. ಆದ್ದರಿಂದ, ನಿಮ್ಮ ಕಾರ್ಯಗಳನ್ನು ಉತ್ತಮವಾಗಿಡುವುದು ಬಹಳ ಮುಖ್ಯ.
ಮಾಂಸ, ಮದ್ಯ ಮತ್ತು ತಾಮಸಿಕ ಆಹಾರವನ್ನು ಸೇವಿಸದಿರಿ
ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಶನಿವಾರ ರಾತ್ರಿ ತಾಮಸಿಕ ಆಹಾರವನ್ನು ಸೇವಿಸಬಾರದು. ಇದರೊಂದಿಗೆ, ಮಾಂಸ ಮತ್ತು ಮದ್ಯದಿಂದಲೂ ದೂರವಿರಬೇಕು. ವಾಸ್ತವವಾಗಿ, ತಾಮಸಿಕ ಆಹಾರವನ್ನು ಸೇವಿಸುವವರು ಶನಿಯ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿ ದೋಷ ನಡೆಯುತ್ತಿರುವವರು ಶನಿವಾರದಂದು ತಾಮಸಿಕ ಆಹಾರವನ್ನು ಸೇವಿಸಲೇಬಾರದು.
ಈ ದಿನ ಜೂಜು ಮತ್ತು ಬೆಟ್ಟಿಂಗ್ನಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಳ್ಳಿ
ಜೂಜು ಮತ್ತು ಬೆಟ್ಟಿಂಗ್ ಅಭ್ಯಾಸವನ್ನು ಹೊಂದಿರುವ ಜನರು ಶನಿದೇವನ ಅಶುಭ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿವಾರದಂದು ನೀವು ಈ ರೀತಿಯ ಅಭ್ಯಾಸಗಳಿಂದ ದೂರವಿರಬೇಕು ಎಂಬುದನ್ನು ಮರೆಯದಿರಿ.
ಶನಿವಾರ ಸಂಜೆ ಯಾರೊಂದಿಗೂ ಸಾಲದ ವ್ಯವಹಾರಗಳನ್ನು ಮಾಡಬೇಡಿ
ನಂಬಿಕೆಗಳ ಪ್ರಕಾರ, ಯಾವುದೇ ವ್ಯಕ್ತಿ ಶನಿವಾರದಂದು ಹಣಕ್ಕೆ ಸಂಬಂಧಿಸಿದಂತೆ ಸಾಲದ ವಹಿವಾಟು ಮಾಡುವುದನ್ನು ತಪ್ಪಿಸಬೇಕು. ಈ ದಿನ ನೀವು ಯಾರಿಂದಲಾದರೂ ಹಣವನ್ನು ಸಾಲವಾಗಿ ತೆಗೆದುಕೊಂಡರೆ ಅದನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ದಿನ ನೀವು ಯಾರಿಗಾದರೂ ಸಾಲೊವಾಗಿ ಹಣವನ್ನು ನೀಡಿದರೆ ಆ ಹಣ ನಿಮ್ಮ ಕೈಗೆ ಮರಳಿ ಬರುವುದಿಲ್ಲ.
ಮನೆಯ ಹಿರಿಯರಿಗೆ ಅಗೌರವ ತೋರದಿರಿ
ಯಾರನ್ನಾದರೂ ಅಗೌರವ ತೋರುವವರ ಮೇಲೆ ಶನಿಯು ತುಂಬಾ ಕೋಪಗೊಳ್ಳುತ್ತಾನೆ. ಅದರಲ್ಲೂ ನಿಮ್ಮ ಮನೆಯ ಹಿರಿಯರಿಗೆ ಗೌರವ ತೋರದಿದ್ದರೆ ಎಂದಿಗೂ ಅವನು ನಿಮ್ಮನ್ನು ಕ್ಷಮಿಸುವುದಿಲ್ಲ. ಅದಕ್ಕೇ ನಿಮ್ಮ ಮನೆಯ ಹಿರಿಯರನ್ನು ಅಗೌರವ ಮಾಡಬೇಡಿ. ಅಲ್ಲದೆ, ನಿಮ್ಮ ಕೈಕೆಳಗೆ ಕೆಲಸ ಮಾಡುವ ಯಾವುದೇ ಉದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಶನಿವಾರದಂದು ಮನೆಯಿಂದ ಹೊರಡುವಾಗಲೆಲ್ಲಾ ಹಿರಿಯರ ಆಶೀರ್ವಾದ ಪಡೆದ ನಂತರವೇ ಹೊರಡಿ.
ಶನಿವಾರದಂದು ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆಯನ್ನು ಖರೀದಿಸದಿರಿ
ಶನಿವಾರದಂದು ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ, ಆದರೆ ಶನಿವಾರದಂದು ಯಾರಿಂದಲೂ ಇಂತಹ ವಸ್ತುಗಳನ್ನು ಸಾಲವಾಗಿ ತೆಗೆದುಕೊಳ್ಳಬೇಡಿ ಅಥವಾ ಖರೀದಿಸಬೇಡಿ. ನಂಬಿಕೆ ಪ್ರಕಾರ, ಶನಿವಾರದಂದು ಈ ಯಾವುದೇ ವಸ್ತುಗಳನ್ನು ಶಾಪಿಂಗ್ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.