ಮೆಸೇಜ್ ಟ್ರೇಸಿಂಗ್​ಗೆ ಬಲವಂತ ಪಡಿಸಿದರೆ ದೇಶ ಬಿಟ್ಟು ಹೋಗ್ತೆವೆ – ವಾಟ್ಸ್​​ಆ್ಯಪ್ ಎಚ್ಚರಿಕೆ..!

ವಾಟ್ಸ್​​ಆ್ಯಪ್ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ. Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ..! ಮೆಸೇಜ್ ಟ್ರೇಸಿಂಗ್​ಗೆ ಬಲವಂತ ಪಡಿಸಿದರೆ ಭಾರತದಿಂದ ತನ್ನ ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸ್​​ಆ್ಯಪ್ ಸಂಸ್ಥೆ ಹೇಳಿದೆ. ಫೇಸ್​ಬುಕ್​ನ ಸೋದರಸಂಸ್ಥೆಯಾದ ವಾಟ್ಸ್​​ಆ್ಯಪ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ವಿಚಾರಣೆಯಲ್ಲಿ ಈ ವಿಚಾರದಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸಿದೆ.