ಶ್ರೀನಗರ: ಗಾಜಾ (Gaza) ಮೇಲೆ ಇಸ್ರೇಲ್ (Israel) ಪಡೆಗಳು ದಾಳಿಗಳನ್ನು ಮುಂದುವರೆಸಿದ್ದು, ಅಲ್ಲಿನ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಇದೇ ಹೊತ್ತಲ್ಲಿ ಕಾಶ್ಮೀರವನ್ನು (Kashmir) ಗಾಜಾಗೆ ಸಮೀಕರಿಸಿ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿಕೆ ನೀಡಿದ್ದಾರೆ.
ನೆರೆಯ ಪಾಕಿಸ್ತಾನದ (Pakistan) ಜೊತೆ ಭಾರತ (India) ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳದೇ ಇದ್ದಲ್ಲಿ ಮುಂದೊಂದು ದಿನ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು. ಅಲ್ಲದೇ ಬಾಂಬ್ಗಳು ಸದ್ದು ಮಾಡಬಹುದು ಎಂಬ ಎಚ್ಚರಿಕೆಯನ್ನು ಫಾರೂಖ್ ಅಬ್ದುಲ್ಲಾ ನೀಡಿದ್ದಾರೆ. ನೆರೆ ಹೊರೆ ದೇಶಗಳ ಜೊತೆ ಸುಮಧುರ ಬಾಂಧವ್ಯ ಹೊಂದಿದರೆ ಎರಡೂ ದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದ್ದಾರೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಇದೇ ಮಾತನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಪ್ರಧಾನಿ ಮೋದಿ ಕೂಡ ಯುದ್ಧ ಆಯ್ಕೆಯಲ್ಲ ಎಂದಿದ್ದಾರೆ. ಪಾಕ್ ವಿಚಾರಕ್ಕೂ ಇದನ್ನು ಅನ್ವಯಿಸಬಹುದು. ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಅವರು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ.
ಆದರೆ ನಾವು ಏಕೆ ಮಾತನಾಡಲು ಸಿದ್ಧರಿಲ್ಲ? ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ಇಸ್ರೇಲ್ನಿಂದ ಬಾಂಬ್ ದಾಳಿಗೊಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್ ಪರಿಸ್ಥಿತಿಯನ್ನು ನಾವೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಫಾರೂಖ್ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.