ಕೂದಲು ಉದುರುವುದು, ತಲೆಹೊಟ್ಟು, ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಮುಂತಾದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗೋಗಿದೆ. ಸಾಮಾನ್ಯವಾಗಿ ಜನರು ದುಬಾರಿ ಶ್ಯಾಂಪೂಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂದಲಿಗೆ ಚಿಕಿತ್ಸೆಯನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಈ ಕೂದಲಿನ ಸಮಸ್ಯೆಗಳಿಗೆ ರಾಮಬಾಣವಾಗಿರುವಂತಹ ಅದ್ಭುತ ವಸ್ತುಗಳು ನಮ್ಮ ಅಡುಗೆಮನೆಯಲ್ಲಿರುತ್ತವೆ. ಕರಿಬೇವಿನ ಸೊಪ್ಪು ಕೂದಲಿಗೆ ಬಹಳ ಮುಖ್ಯವಾಗಿದೆ. ಕರಿಬೇವಿನ ಸೊಪ್ಪಿನಿಂದ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆಗಿನ ಕಾಲದ ಅಜ್ಜಿಯಂದಿರು ಇದನ್ನೇ ಉಪಯೋಗಿಸುತ್ತಿದ್ದರು. ನೀವು ಅವುಗಳನ್ನು ಕರಿಬೇವನ್ನ ಸರಿಯಾಗಿ ಬಳಸಿದರೆ, ನಿಮ್ಮ ಕೂದಲಿಗೆ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.
ಕೂದಲು ಉದುರುವಿಕೆಗೆ ಕರಿಬೇವಿನ ಎಲೆಗಳು :
ಕೂದಲು ಉದುರುವ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಪ್ರಯತ್ನಿಸಿದ್ದರೆ, ಅಂತವರು ಈ ಮನೆ ಮದ್ದನ್ನ ಉಪಯೋಗಿಸಿದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳೆಯೋದಕ್ಕೆ ಕರಿಬೇವಿನ ಎಲೆಗಳು ರಾಮಬಾಣ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಸಿ, ಕಬ್ಬಿನಾಂಶ, ಕ್ಯಾಲ್ಸಿಯಂ, ಪೋಸ್ಪರಸ್, ನಿಕೊಟಿನಿಕ್ ಆಮ್ಲವಿದೆ. ಕರಿಬೇವಿನ ಎಲೆಗಳನ್ನು ಕೂದಲಿಗೆ ಬಳಸಿಕೊಳ್ಳುವುದು ಅನ್ನೋದನ್ನ ನೋಡಿ.. ಕೆಲವು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕರಿಬೇವಿನ ಎಲೆ ಕಪ್ಪಾಗುವವರೆಗೆ ಬೇಯಿಸಿ. ಎಣ್ಣೆ ತಣ್ಣಗಾದ ಬಳಿಕ ಫಿಲ್ಟರ್ ಮಾಡಿ ಮತ್ತುಸ್ವಚ್ಛತೆಯಿಂದ ಕೂಡಿದ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಿ. ವಾರಕ್ಕೆ 2-3 ಬಾರಿ ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಕೆಲವು ಗಂಟೆಗಳ ನಂತರ ಕೂದಲನ್ನ ತೊಳೆಯಿರಿ.
ತಲೆಹೊಟ್ಟು ನಿವಾರಣೆಗೆ ಕರಿಬೇವು :
ಕೂದಲಿನಲ್ಲಿರುವ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಕರಿಬೇವಿನ ಸೊಪ್ಪನ್ನು ಮೊಸರಿನ ಜೊತೆಗೆ ಪೇಸ್ಟ್ ಮಾಡಿ ತಲೆಯ ಬುಡಕ್ಕೆ ಹಚ್ಚಿ ಕನಿಷ್ಠ ಅರ್ಧಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ವಾರದಲ್ಲಿ 2-3 ಬಾರಿ ಈ ರೀತಿ ಮಾಡಿದರೆ ತೆಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಶೀತ ವಾತಾವರಣದಲ್ಲಿ ಈ ಮಿಶ್ರಣವನ್ನ ಉಪಯೋಗಿಸಲು ಹೋಗಬೇಡಿ ಶೀತ ಮತ್ತು ಜ್ವರ ಉಂಟಾಗುತ್ತದೆ.
ಕೂದಲನ್ನು ಕಪ್ಪಾಗಿಸಲು ಕರಿಬೇವಿನ ಎಲೆಗಳ ಬಳಕೆ :
ಬಿಳಿ ಕೂದಲು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಕಾಡುವ ಸಮಸ್ಯೆ ಎಂದರೆ ತಪ್ಪಾಗಲಿಕ್ಕಿಲ್ಲ, ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಹೆಚ್ಚಾಗಿ ಮಧ್ಯವಯಸ್ಕರಿಗೆ ಕಾಡೋದಕ್ಕೆ ಶುರುಮಾಡಿದೆ. ಬಿಳಿ ಕೂದಲು ಕಡಿಮೆ ಮಾಡಿಕೊಳ್ಳೋದಕ್ಕೆ ಸಾಕಷ್ಟು ಪ್ರಯತ್ನ ಮಾಡಿರುತ್ತಾರೆ ಅಂತವರು ಈ ಮನೆ ಮದನ್ನ ಬಳಸಿದರೆ ಖಂಡಿತವಾಗಿ ಬಿಳಿಕೂದಲಿನಿಂದ ಮುಕ್ತಿ ಕಾಣಬಹುದು. ಮೊದಲಿಗೆ ತೆಂಗಿನ ಎಣ್ಣೆಯನ್ನ ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಿ ಅದಕ್ಕೆ ಮೆಂತ್ಯ ಕಾಳುಗಳನ್ನ ಸೇರಿಸಿ ಕಾಳುಗಳು ಕೆಂಪು ಬಣ್ಣಕ್ಕೆ ತಿರುಗುವ ವರೆಗೆ ಕಾಯಿಸಿಕೊಳ್ಳಬೇಕು ನಂತೆ ಕರಿಬೇವಿನ ಎಲೆಗಳನ್ನು ಸೇರಿಸಿ ಜೊತೆಗೆ ತುರಿದ ಈರುಳ್ಳಿ ಹಾಕಿ 10 ನಿಮಿಷಗಳ ಕಾಲ ಎಣ್ಣೆಯನ್ನು ಬೇಯಿಸಿ. ಎಣ್ಣೆ ತಣ್ಣಗಾದ ನಂತರ, ಅದನ್ನು ಫಿಲ್ಟರ್ ಮಾಡಿ ಶುದ್ಧವಾದ ಗಾಜಿನ ಬಾಟಲಿಯಲ್ಲಿ ಹಾಕಿ ಶೇಕರಿಸಿಕೊಳ್ಳಿ. ರಾತ್ರಿ ಮಲಗುವಾಗ ಈ ಎಣ್ಣೆಯನ್ನು ತಲೆಗೆ ಹಚ್ಚಿ ಬೆಳಗ್ಗೆ ತಲೆ ತೊಳೆಯಿರಿ. ಈ ರೀತಿಯಾಗಿ ಮಾಡೋದ್ರಿಂದ ಶೀಘ್ರದಲ್ಲೇ ನಿಮ್ಮ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.