ವೈದಿಕ ಜ್ಯೋತಿಷ್ಯದ ಪ್ರಕಾರ, ಕಣ್ಣು ಮಿಟುಕಿಸುವುದನ್ನು ಭವಿಷ್ಯವನ್ನು ಊಹಿಸುವ ಸಾಧನವಾಗಿ ಬಳಸಬಹುದು. ಆದರೆ ಈ ಭವಿಷ್ಯವು ಲಿಂಗ ಮತ್ತು ಕಣ್ಣಿನ ದೃಷ್ಟಿಕೋನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಇದಲ್ಲದೆ, ಎಡಗಣ್ಣಿಗೆ ಹೋಲಿಸಿದರೆ ಬಲಭಾಗದ ಕಣ್ಣು ಅದುರುವಿಕೆಯ ಫಲಿತಾಂಶಗಳು ಭಿನ್ನವಾಗಿರುತ್ತವೆ.ನಿಮ್ಮ ಜೀವನದಲ್ಲಿ ಯಾವುದು ಒಳ್ಳೆಯದು ಮತ್ತು ಯಾವಾಗ ತಪ್ಪು ಸಂಭವಿಸಲಿದೆ ಎಂಬುದರ ಕುರಿತು ನಮ್ಮ ದೇಹವು ಕೆಲವು ಸುಳಿವುಗಳನ್ನು ನೀಡುತ್ತಲೇ ಇರುತ್ತದೆ.
ಕಣ್ಣು ಅದುರಿದರೆ ಏನರ್ಥ
ನಮ್ಮಲ್ಲಿರು ಮೂಢನಂಬಿಕೆಯ ಪ್ರಕಾರ ಕಣ್ಣಿನಲ್ಲಿರುವ ಸೆಳೆತದ ಕಲ್ಪನೆಯು ಚೈನೀಸ್ ನಂಬಿಕೆಗೆಗಿಂತ ಭಿನ್ನವಾಗಿದೆ. ಬಲಗಣ್ಣು ಅದುರುವುದು ಭಾರತದಲ್ಲಿ ಉತ್ತಮ ಸಂಕೇತವಾಗಿದೆ, ಆದರೆ ಎಡಗಣ್ಣಿನ ಸೆಳೆತವನ್ನು ಪ್ರತಿಕೂಲವೆಂದು ಪರಿಗಣಿಸಲಾಗುತ್ತದೆ. ಕಣ್ಣಿನ ಅದುರುವಿಕೆಯು ಅಪರೂಪವಾಗಿ ಲಿಂಗವನ್ನು ಆಧರಿಸಿರಬಹುದು. ಮಹಿಳೆಯರಿಗೆ ಎಡಗಣ್ಣು ಅದುರಿದರೆ ಶುಭವೆಂದೂ, ಪುರುಷರಿಗೆ ಇದು ಕೆಟ್ಟ ಸಂಕೇತವೆಂದು ಹೇಳಲಾಗುತ್ತದೆ.
ಮಹಿಳೆಯರಿಗೆ ಎಡಗಣ್ಣು ಮಿಟುಕಿದರೆ..
ಹೆಣ್ಣುಮಕ್ಕಳಲ್ಲಿ ಎಡಗಣ್ಣು ಅದುರಿದರೆ ಅದು ನಿಮ್ಮ ಜೀವನದಲ್ಲಿ ಒಂದು ಭರವಸೆಯ ಸಂಕೇತವಾಗಿದೆ. ಅಂತಿಮವಾಗಿ, ನೀವು ಕೆಲವು ಕುಟುಂಬಗಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.
ಮಹಿಳೆಯರಿಗೆ, ಎಡಗಣ್ಣಿನ ಸೆಳೆತವು ಅದೃಷ್ಟವನ್ನು ತರುತ್ತದೆ. ಪದೇ ಪದೇ ಎಡಗಣ್ಣು ಹೊಡೆದುಕೊಂಡರೆ ಬಹಳ ಬೇಗ ಒಳ್ಳೆಯ ಸುದ್ದಿ ಕೇಳಿ ಬರಲಿದೆ ಅಥವಾ ಜೀವನದಲ್ಲಿ ಒಳ್ಳೆಯ ಘಟನೆ ನಡೆಯಲಿದೆ ಎನ್ನುವ ಅರ್ಥವಾಗಿದೆ. ಆದರೆ, ಬಲಗಣ್ಣಿನ ಸೆಳೆತವನ್ನು ಅಷ್ಟು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅವರಿಗೆ ಇದು ಬಹಳ ಕೆಟ್ಟ ಫಲಗಳನ್ನ ನೀಡುತ್ತದೆ ಎನ್ನುವ ನಂಬಿಕೆ ಇದೆ.
ಪುರುಷರ ವಿಷಯದಲ್ಲಿ ಇದು ವಿರುದ್ಧ ಎನ್ನಬಹುದು. ಏಕೆಂದರೆ ಅವರಿಗೆ ಎಡಗಣ್ಣು ಸೆಳೆತದ ಬಲ ಎಂದರೆ ಶೀಘ್ರದಲ್ಲೇ ಪ್ರೀತಿಪಾತ್ರರನ್ನು ಅಥವಾ ಅವನ ಸಂಗಾತಿಯನ್ನು ಭೇಟಿಯಾಗುತ್ತಾನೆಎನ್ನುವ ಅರ್ಥವಾಗಿದೆ. ಇದಲ್ಲದೇ, ಅವರ ಬಹುಕಾಲದ ಕನಸು ಶೀಘ್ರದಲ್ಲೇ ನನಸಾಗಲಿದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಅವರಿಗೆ ಎಡಗಣ್ಣು ಹೊಡೆದುಕೊಂಡರೆ ಕೆಟ್ಟದ್ದಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅವರಿಗೆ ಆರ್ಥಿಕ ಸಮಸ್ಯೆಗಳು ಬರುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸಬೇಕಾಗುತ್ತದೆ.
ಇನ್ನು ಮಹಿಳೆಯರಿಗೆ ಎಡಗಟ್ಟು 3 ದಿನಗಳ ಕಾಲ ಒಟ್ಟಿಗೆ ಬಡಿದುಕೊಂಡರೆ ಉದ್ಯೋಗದಲ್ಲಿ ಬಡ್ತಿ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಅವರು ಅಂದುಕೊಂಡ ಎಲ್ಲಾ ಕೆಲಸಗಳು ಸರಾಗವಾಗಿ ಆಗುತ್ತದೆ. ಇದು ಅವರ ಆಸೆಗಳನ್ನ ಈಡೇರಿಸಿಕೊಳ್ಳುವ ಸಮಯ ಬಂದಾಗಿದೆ ಎಂಬುದನ್ನ ಸೂಚಿಸುತ್ತದೆ. ಅಲ್ಲದೇ, ಕುಟುಂಬದ ಸದಸ್ಯರಿಗೂ ಇದರಿಂದ ಒಳ್ಳೆಯದಾಗುತ್ತದೆ. ಒಟ್ಟಾರೆ ಇದು ಅದೃಷ್ಟವನ್ನ ತರುತ್ತದೆ ಎನ್ನಬಹುದು.
ಎಡಗಣ್ಣಿನ ಯಾವ ಭಾಗವು ಹೊಡೆದುಕೊಳ್ಳುತ್ತಿದೆ ಎಂಬುದರ ಮೇಲೆ ಅರ್ಥ ಸಹ ಬದಲಾಗುತ್ತದೆ. ಕಣ್ಣಿನ ಮೇಲಿನ ಕಣ್ಣು ರೆಪ್ಪೆ ಹೊಡೆದುಕೊಂಡರೆ ಒಂದು ರೀತಿಯಾಗಿ ಲಾಭಗಳನ್ನ ನೀಡುತ್ತದೆ. ಹಾಗೆಯೇ, ಕೆಳಗಿನ ರೆಪ್ಪೆ ಹೊಡೆದುಕೊಂಡರೆ ಇನ್ನೊಂದು ಅರ್ಥವಿದೆ. ಹಾಗೆಯೇ, ಎಡಗಣ್ಣಿನ ಮೂಲೆಯಲ್ಲಿ ಹೊಡೆದುಕೊಂಡರೆ ಅದು ಬಹಳ ಶುಭ ಸಂಕೇತ ಎನ್ನಲಾಗುತ್ತದೆ. ದರೆ ಸಂಜೆ 5 ಗಂಟೆಯಿಂದ ಬೆಳಗ್ಗೆ 6ರವರೆಗೆ ಈ ಸಮಯದಲ್ಲಿ ಎಡಗಣ್ಣು ಅದರುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಹೌದು, ಇದು ಪುರುಷರಿಗೆ ಹಾಗೂ ಮಹಿಳೆಯರಿಗೆ ಇಬ್ಬರಿಗೂ ಸಂಬಂಧಿಸಿದ್ದಾಗಿದ್ದು, ಕಹಿ ಘಟನೆಗಳು ನಡೆಯುವ ಸಂಕೇತ ಇದು.