ಲಖನೌ ;- ಸನಾತನ ಧರ್ಮ ನಿರ್ಮೂಲನೆ ಮಾಡಿದರೆ ಮಾನವೀಯತೆ ಬಿಕ್ಕಟ್ಟು ಉದ್ಭವಿಸಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರು ಹಾದಿಯಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನಾತನವನ್ನು ಹೊರತುಪಡಿಸಿ ಪಂಥ ಮತ್ತು ಪೂಜಾ ವಿಧಾನಗಳು ಎಂದಿದ್ದಾರೆ.

ಯೋಗಿ ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಪಕ್ಷಗಳ ಒಕ್ಕೂಟ ಇಂಡಿಯಾಕ್ಕೆ ಚಾಟಿ ಬೀಸಿದ್ದಾರೆ.
ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಉಳಿದೆಲ್ಲವೂ ಪಂಥ ಹಾಗೂ ಪೂಜಾ ವಿಧಾನಗಳಿವೆ. ಒಂದು ವೇಳೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿದರೆ ವಿಶ್ವದಾದ್ಯಂತ ಮಾನವೀಯತೆಯ ಬಿಕ್ಕಟ್ಟು ಉದ್ಭವಿಸಲಿದೆ ಎಂದು ಹೇಳಿದ್ದಾರೆ.

