ನವದೆಹಲಿ:- ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ “ಕೆಟ್ಟ ಫಲಿತಾಂಶ” ಎದುರಿಸಬೇಕಾಗುತ್ತದೆ ಎಂದರು.
ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ, ಇಂದು ಬಂದಿರುವುದಕ್ಕಿಂತ ಕೆಟ್ಟ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಡಿಸೆಂಬರ್ 4 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಮತ್ತು ಮೂರು ಪ್ರಮುಖರ ವಿರುದ್ಧದ ‘ಪ್ರಶ್ನೆಗೆ ನಗದು’ ಆರೋಪಗಳ ಕುರಿತು ನೈತಿಕ ಸಮಿತಿಯ ವರದಿಗಳ ಮಂಡನೆಗೆ ಸಾಕ್ಷಿಯಾಗುವುದರಿಂದ ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು “ಎಲ್ಲಾ ವಿಷಯಗಳ” ಬಗ್ಗೆ ಚರ್ಚಿಸಲು ಸಿದ್ಧವಾಗಿದೆ, ಆದರೆ ಅದನ್ನು “ನಿಯಮಗಳು ಮತ್ತು ಕಾರ್ಯವಿಧಾನಗಳನ್ನು” ಅನುಸರಿಸಬೇಕು ಎಂದು ಪ್ರಸ್ತಾಪಿಸಿದರು.