ಬೆಂಗಳೂರು: 2028 ರಲ್ಲಿ ನಮ್ಮ ಸರ್ಕಾರ ಬಂದರೆ 2000 ರಿಂದ 4000 ಕ್ಕೆ ಏರಿಕೆ ಮಾಡ್ತೇವೆ ಎಂದು ಕುಣಿಗಲ್ ಶಾಸಕ ರಂಗನಾಥ್ ಗ್ಯಾರಂಟಿ ಯೋಜನೆ ಬಗ್ಗೆ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಿಂದ ಏನಾಗುತ್ತೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಒಂದು ಚಿಟಿಕೆ ಅರಿಶಿನದಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ: ಹೀಗೆ ಮಾಡಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.!
ಬಡವರಿಗೆ ಪ್ರತಿವರ್ಷ 24,000 ಕೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆ ಬರುತ್ತದೆ. ಗೃಹ ಲಕ್ಷ್ಮಿ ಯೋಜನೆಗೆ ವಿರೋಧಿಸಿದರೆ ಜನರ ಶಾಪ ತಟ್ಟುತ್ತದೆ. ಮುಂದೆ ಸರ್ಕಾರ ಬದಲಾವಣೆ ಆದರೂ ಗ್ಯಾರಂಟಿ ಯೋಜನೆ ನಿಲ್ಲಿಸಲು ಅಸಾಧ್ಯ. 2028 ರಲ್ಲಿ ನಮ್ಮ ಸರ್ಕಾರ ಬಂದರೆ ಗೃಹಲಕ್ಷ್ಮೀ ಹಣವನ್ನು 2 ಸಾವಿರದಿಂದ 4 ಸಾವಿರಕ್ಕೆ ಏರಿಕೆ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.