ಹುಬ್ಬಳ್ಳಿ, – ಶಿವಾಜಿ ಮಹಾರಾಜರು ಇರದೇ ಇದ್ದರೆ ನನ್ನ ಹೆಸರು ಅರವಿಂದ ಇರದೇ ಬೇರೇನೋ ಇರುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರ ನೇತೃತ್ವದಲ್ಲಿ ನಡೆದ ಮೊಘಲರ ಹಾಗೂ ಆದಿಲಶಾಹಿಗಳ ವಿರುದ್ದ ಮರಾಠರ ಹೋರಾಟ ಹಾಗೂ
ಬಲಿದಾನದಿಂದಾಗಿ ಇವತ್ತು ಹಿಂದೂ ಸಮಾಜ ಉಳಿದಿದೆ. ಸಮಸ್ತ ಹಿಂದೂ ಸಮಾಜ ಇಂದು ಇದರ ಋಣ ತೀರಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಅವರು ನುಡಿದರು.
ಅವರು ಕ್ಷತ್ರಿಯ ಮರಾಠಾ ಸಮಾಜ (96/ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ (ರಿ), ವತಿಯಿಂದ ಜೀಜಾಮಾತಾ ಮರಾಠಾ ಮಹಿಳಾ ಮಂಡಳ ಮರಾಠಾ ಗಲ್ಲಿ ಇವರ ಸಹಯೋಗದಲ್ಲಿ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಇವರ ಆಶ್ರಯದಲ್ಲಿ ಹುಬ್ಬಳಿಯಲ್ಲಿಂದು ವಿದ್ಯಾನಗರದ ಮರಾಠಾ ಭಾರತಿಮಠ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ ವಧೂವರರ ಸಮಾವೇಶ ಗಳನ್ನೂ ಆಯೋಜನೆ ಮಾಡುವದರಿಂದ ಪಾಲಕರು ಮದುವೆಯ ವೆಚ್ಚದಲ್ಲಿ ಸಾಕಷ್ಟು ಮಿತವ್ಯಯ ಸಾಧಿಸಬಹುದಾಗಿದೆ. ಅಲ್ಲದೆ ಇಂದು ವ್ಯಾಪಕ ಪಿಡುಗಾಗಿರುವ ಲವ್ ಜೆಹಾದ್ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಬಹಳ
ಸಹಕಾರಿ ಆಗುತ್ತದೆ ಪಾಲಕರು ವಧು ವರ ಸಮಾವೇಶದ ಪ್ರಯೋಜನ ಪಡೆದು ಕೊಳ್ಳಬೇಕು ಎಂದು ನುಡಿದರು.
ಮಹಾನಗರ ಪಾಲಿಕೆ ಸದಸ್ಯ ಮಯೂರ ಮೋರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇಂದು ಮಕ್ಕಳ
ಮದುವೆ ಮಾಡಲು ಪಾಲಕರು ಪಡುವ ಕಷ್ಟ ತಪ್ಪಿಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಮರಾಠಾ ಶ್ರೀ ಭಾರತಿಮಠ ಟ್ರಸ್ಟ ಅಧ್ಯಕ್ಷರಾದ ಸುನೀಲ ದಳವಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷತ್ರಿಯ ಮರಾಠಾ ಸಮಾಜ (96/ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ (ರಿ), ಅಧ್ಯಕ್ಷರಾದ ಶೈಲೇಂದ್ರ ಪಿ ಹೊನ್ನಳ್ಳಿ ವಹಿಸಿದ್ದರು.
ವೇದಿಕೆಯ ಮೇಲೆ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೇಳಕೆ, ನಾರಾಯಣ ವೈದ್ಯ, ಶಾಮರಾವ್ ಶಿಂಧೆ, ಅರುಣ ಗೋಳೆ,ಸಂಜಯ ಸಾಟೆ, ನಾರಾಯಣರಾವ ಮೋಹಿತೆ, ಭಾರತಿ ಸವ್ವಾಸೆ, ವಿಧ್ಯಾ ಪವಾರ ಮತ್ತಿತರರು ಉಪಸ್ಥಿತರಿದ್ದರು.