ವಿಜಯಪುರ:- ಬಿಜೆಪಿಗೆ ಜಗದೀಶ್ ಶೆಟ್ಟರ್ ವಾಪಸ್ ಬರ್ತಾರೆ ಎಂಬ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈಶ್ವರಪ್ಪ ಹೇಳ್ತಿರೋದು ಹಸಿ.. ಹಸಿ.. ಸುಳ್ಳು.. ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ. ನನಗೆ ಯಾರು ಆಹ್ವಾನವನ್ನು ಕೊಟ್ಟಿಲ್ಲ. ಬಿಜೆಪಿಯವರು ಕಾಂಗ್ರೆಸ್ ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡ್ತಿದ್ದಾರೆ. ನಾನು ಬಿಜೆಪಿಗೆ ಹೋಗ್ತಿದ್ದೇನೆ ಎಂದು ಹೇಳಿ ಕಾಂಗ್ರೆಸ್ ಗೆ ಬರುವವರನ್ನ ತಡೆಯುವ ಪ್ರಯತ್ನ ನಡೆದಿದೆ. ಜಗದೀಶ್ ಶಟ್ಟರ್ ರೆ ಬಿಜೆಪಿಗೆ ಬಂದು ಬಿಡ್ತಾರೆ ನೀವು ಕಾಂಗ್ರೆಸ್ ಗೆ ಹೋಗಬೇಡಿ ಎಂದು ಹೇಳ್ತಿದ್ದಾರೆ. ನನಗೆ, ಸವದಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನ ವಿಧಾನ ಸಭಾ ಚುನಾವಣೆಯಲ್ಲಿ ಜನ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಆ ಎಫೆಕ್ಟ್ ಆಗಬಾರದು ಎಂದು ಈ ರೀತಿ ಸುಳ್ಳು ಹಬ್ಬಿಸ್ತಿದ್ದಾರೆ ಎಂದು ಆರೋಪಿಸಿದರು.
ಶೆಟ್ಟರ್ ರಕ್ತದಲ್ಲಿ ಹಿಂದೂತ್ವದ ರಕ್ತ ಎಂಬ ಈಶ್ವರಪ್ಪ ಹೇಳಿಕೆಗೂ ಇದೇ ವೇಳೆ ತಿರುಗೇಟು ಕೊಟ್ಟ ಶೆಟ್ಟರ್, ನನ್ನ ರಕ್ತದಲ್ಲಿ ಹರಿಯೋದು ಹಿಂದುತ್ವವಾದರೆ ಟಿಕೆಟ್ ತಪ್ಪಿಸಿದ್ಯಾಕೆ? ಜನಸಂಘ ಸಮಯದಿಂದ ನಮ್ಮ ತಂದೆ, ಕಾಕಂದಿರು ಸಂಘಟನೆ ಮಾಡಿಕೊಂಡು ಬಂದವರು. ಅವರ ವ್ಯಕ್ತಿಗೆ ಸಣ್ಣ ಎಂಎಲ್ಎ ಟಿಕೆಟ್ ಕೊಡೊಕೆ ಆಗಲಿಲ್ಲ. ಜನಸಂಘದಿಂದ ಬಂದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ, ಬಿಜೆಪಿ ಯಾರನ್ನ ಕಡೆಗಣಿಸುತ್ತಿದೆ ಅನ್ನೋದಕ್ಕೆ ಇದು ತಾಜಾ ಉದಾಹರಣೆ ಎಂದು ಹೇಳಿದರು.
ಹಿಂದೂತ್ವ ರಾಜಕಾರಣವನ್ನ ಬೆರೆಸಲಾಗ್ತಿದೆ. ಯಾಕೆ ಬೆರಿಸ್ತಿದ್ದಾರೆ ನನಗು ಗೊತ್ತಿಲ್ಲ. ಹಿಂದೂಳಿದ ವರ್ಗದವರು, ಶೋಷಿತರು ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಧರ್ಮಗಳ ಜೊತೆಗೆ ಸೌಹಾರ್ದ ವಾತಾವರಣ ಉಂಟು ಮಾಡುವ ಅವಶ್ಯಕತೆ ಇದೆ. ಕಾಂಗ್ರೆಸ್ಗೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಬಿಜೆಪಿ, ಇದನ್ನ ಆತ್ಮಾವಲೋಕನ ಮಾಡಿಕೊಳ್ಳಲಿ. ಈಶ್ವರಪ್ಪ ನನಗೆ ಹೇಳೋದಲ್ಲ. ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿಗೆ ಅಪಮಾನ ಮಾಡಿದ್ದಾರೆ. ಬಹಳ ಹೀನಾಯವಾಗಿ ನಡೆಸಿಕೊಂಡು ಅಪಮಾನ ಮಾಡಿದರು ಎಂದು ಟೀಕಿಸಿದರು.