ಐಸಿಸಿ, ನೂತನ ಟೆಸ್ಟ್ ರ್ಯಾಂಕಿಂಗ್ ಪ್ರಕಟಿಸಿದ್ದು, 1965ರ ನಂತರ ಟೆಸ್ಟ್ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನ್ ತಂಡ ಪಾತಾಳಕ್ಕೆ ಕುಸಿದಿದೆ.
Renukaswamy Case: ಅಯ್ಯೋ! ಅಷ್ಟೊಂದು ಸಾಕ್ಷಿಗಳಾ.. ಚಾರ್ಜ್ʼಶೀಟ್ ಪುಟಗಳ ಸಂಖ್ಯೆ ತಿಳಿದು ದಂಗಾದ ದರ್ಶನ್!
ಬಾಂಗ್ಲಾದೇಶ ವಿರುದ್ಧ ತವರಿನಲ್ಲೇ 2-0 ಅಂತರದ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ತವರಿನಲ್ಲಿ ಬಾಂಗ್ಲಾದೇಶ ತಂಡವನ್ನು ಸುಲಭವಾಗಿ ಮಣಿಸುವ ಇರಾದೆಯಲ್ಲಿದ್ದ ಪಾಕ್ ತಂಡಕ್ಕೆ ಸರಣಿ ಸೋಲಿನ ಶಾಕ್ ಒಂದೆಡೆಯಾದರೆ, ಇನ್ನೊಂದೆಡೆ ಟೆಸ್ಟ್ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.
ಬಾಂಗ್ಲಾದೇಶದೊಂದಿಗಿನ ಟೆಸ್ಟ್ ಸರಣಿಗೂ ಮೊದಲು, ಪಾಕಿಸ್ತಾನ ತಂಡವು ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿತ್ತು. ಆದರೆ ಈ ಸರಣಿಯಲ್ಲಿ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರಿಂದ ತಂಡ ರ್ಯಾಂಕಿಂಗ್ನಲ್ಲೂ ಕುಸಿತಕಂಡಿದೆ.
ಇದೀಗ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಪಾಕಿಸ್ತಾನ ತಂಡ 1965 ರ ನಂತರ ಈ ಕಳಪೆ ಸಾಧನೆಗೆ ಕೊರಳೊಡ್ಡಿದೆ. ಅಂದರೆ 1965ರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡ ಇಷ್ಟೊಂದು ಕೆಟ್ಟ ಸ್ಥಿತಿಯಲ್ಲಿರುವುದು ಇದೇ ಮೊದಲು. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡ ಈಗ ವೆಸ್ಟ್ ಇಂಡೀಸ್ಗಿಂತ ಕೆಳಕ್ಕೆ ಕುಸಿದಿದೆ.