ಹೆಲಿಕಾಪ್ಟರ್ ಪತನಗೊಂಡು ಇಬ್ರಾಹಿಂ ರೈಸಿ ನಿಧನ: ಇರಾನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು ಘಟನೆಯಲ್ಲಿ ರೈಸಿ ಸಜೀವ ದಹನವಾಗಿದ್ದಾರೆ. ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ ಇರಾನ್​​ನಲ್ಲಿ ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ವಹಿಸಿಕೊಂಡಿದ್ದಾರೆ. ಇರಾನ್​​ ಸಂವಿಧಾನದ ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ. ಭಾನುವಾರ ರಾತ್ರಿ ಇರಾನ್-ಅಜೆರ್ಬೈಜಾನಿ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟಿನ ಉದ್ಘಾಟನೆಯ ನಂತರ ಇರಾನಿನ ನಗರವಾದ ತಬ್ರಿಜ್‌ಗೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತಗೊಂಡಿದೆ. ಈ ಅಪಘಾತದಲ್ಲಿ ವಿದೇಶಾಂಗ ಸಚಿವ ಹುಸೇನ್ … Continue reading ಹೆಲಿಕಾಪ್ಟರ್ ಪತನಗೊಂಡು ಇಬ್ರಾಹಿಂ ರೈಸಿ ನಿಧನ: ಇರಾನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್