ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬಂತೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ನಾನು ಒಂದಲ್ಲ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಭವಿಷ್ಯ ನುಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಸಿಎಂ ಆಗಲ್ಲವೆಂಬ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈಗ ಅಂತಹ ಸನ್ನಿವೇಶ ಬಂದಿಲ್ಲ.
ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾರೆ, ಮುಂದೆಯೂ ಇರ್ತಾರೆ. ನಾನು ಕೂಡಾ ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗ್ತೇನೆ. ಶಿವಾನಂದ ಪಾಟೀಲ್ ಹೇಳಿದಂತೆ ನಾನು ಆಗ್ತೇನೆ. ಆದರೆ ಶಿವಾನಂದ ಪಾಟೀಲರು ಆಗಲ್ಲ, ಅವರು ಜೆಡಿಎಸ್ ನಿಂದ ಬಂದವರು. ಬದಲಾಗಿ ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದರು.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ಮೂಡಾ ಕೇಸ್ ಡೈವರ್ಟ್ ಗೆ ದರ್ಶನ್ ಫೋಟೋ ರಿಲೀಸ್ ಆರೋಪಕ್ಕೆ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಶಿ ತಿಳಿದವರು. ಅವರು ಈ ರೀತಿ ಮಾತನಾಡೋದು ಸರಿಯಲ್ಲ. ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದು ಗಂಭೀರವಾದ ವಿಚಾರವಾಗಿದೆ ಎಂದರು. ನಾನು ಗೃಹ ಸಚಿವನಾಗಿದ್ದೆ. ಆಗಲೂ ಜೈಲಿನಲ್ಲಿ ಇಂತ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಅಂಡ್ ಟೀಮ್ ಚದುರಿಸಲಾಗಿದೆ. ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದರು.