ಭಾಗ್ಯಶ್ರೀ (Bhagyashree) ಅವರ ಬಿಗ್ಬಾಸ್ (Big Boss Kannada) ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು, ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು, ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್, ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ.
ಬಿಗ್ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್ ನೂರಕ್ಕೆ ನೂರು ಹಾಕಿದೀನಿ.
ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ‘ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು.
ಫೇಕ್ ಅಂತ ಅನಿಸಕೊಂಡು ಫ್ರೆಂಡ್ಷಿಪ್ ಮಾಡುವ ಬದಲು, ಆಟವಾಡುವಾಗ ಎಲ್ಲರ ಜೊತೆ ಇದ್ದು, ಉಳಿದ ಟೈಮಲ್ಲಿ ನನ್ನ ಪಾಡಿಗೆ ನಾನು ಇದ್ರಾಯ್ತಲ್ವಾ ಅಂದ್ಕೊಳ್ತಿದ್ದೆ. ಆದರೆ ಗುಂಪಲ್ಲೇ ಇದ್ದು ಆಡಬೇಕು. ಆಗ ಇನ್ನೊಂದಿಷ್ಟು ವಾರ ಇರ್ತಿದ್ದೆ ಅನ್ನೋದು ಖಂಡಿತ ಸುಳ್ಳು. ಆ ಥರ ನನಗೆ ಯಾವಾಗಲೂ ಅನಿಸಿಲ್ಲ.
ಇಲ್ಲಿ ಕೆಲವರು ಇವರು ಫೇಕ್ ಇದ್ದಾರೆ, ಇವರ ಎಮೋಷನ್ಸ್ ಫೇಕ್ ಅಂತ ಹೇಳ್ದಾಗ, ಸಿರಿಯವರು ನನ್ನನ್ನು ತುಂಬ ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರ ಬಳಿ ಹೋಗಿ ಶೇರ್ ಮಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನಾನು ಅವರ ಬಳಿ ಆಯುಷ್ ಬಗ್ಗೆ ಮಾತಾಡ್ತಿದ್ದೆ ರಾತ್ರಿ ಹೊತ್ತಲ್ಲಿ. ಅವರು ನನಗೆ ಸಮಾಧಾನ ಮಾಡ್ತಿದ್ರು. ನನಗೆ ನನ್ನ ಮಗನ ತಬ್ಬಿಕೊಂಡು ಮಲಗೋದು ಮಿಸ್ ಮಾಡ್ಕೊಳ್ಳೋವಾಗ ಅವರನ್ನೇ ತಬ್ಬಿಕೊಂಡು ಮಲಗ್ತಿದ್ದೆ.