ನವದೆಹಲಿ: ಇಡೀ ವಿಶ್ವವೇ ಭಾರತದ ಸ್ನೇಹವನ್ನು ಸ್ವೀಕರಿಸಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರ. ಸಂಸತ್ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿ. ಹಳೆಯ ಸಂಸತ್ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ. ಹಳೇ ಮನೆ ಬಿಟ್ಟು ಹೋಗಲು ಕುಟುಂಬಕ್ಕೆ ಎಷ್ಟು ಕಷ್ಟವೋ ಹಾಗೆ. ಅನೇಕ ಕಹಿ, ಸಿಹಿ ನೆನಪುಗಳ ಸಮ್ಮಿಲನ ಹಳೆಯ ಸಂಸತ್ ಭವನ.
Araga Gyanendra: ಚೈತ್ರಾ ಕುಂದಾಪುರ ಹಗರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ: ಆರಗ ಜ್ಞಾನೇಂದ್ರ
ಒಂದು ಕುಟುಂಬ ಹಳೇ ಮನೆ ಬಿಟ್ಟು ಹೋಗಲು ಆಗಲ್ಲ. ಈ ಸದನ ಬಿಟ್ಟು ಹೊಸ ಸದನಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದಾಗ ಭಾವುಕನಾಗಿದ್ದೆ. ಸಂಸತ್ ಭವನದ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕಾರ ಮಾಡಿದ್ದೆ. ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
