ಧಾರವಾಡ: “ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಕೇಸ್ ದಾಖಲಾತಿ ವಿಚಾರ ಗೊತ್ತಿದೆ. ಅವರ ಮೇಲೆ ನನಗೆ ಅಪಾರವಾದ ನಂಬಿಕೆಯಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, “ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಕೇಸ್ ದಾಖಲಾತಿ ವಿಚಾರ ಗೊತ್ತಿದೆ. ಅವರ ಮೇಲೆ ನನಗೆ ಅಪಾರವಾದ ನಂಬಿಕೆಯಿದೆ. ಈ ವಿಷಯದಲ್ಲಿ ಸಂತ್ರಸ್ತೆ ತಾಯಿ ದೂರು ದಾಖಲು ಮಾಡಿದ್ದಾರೆ. ಸ್ವಲ್ಪ ಕಾದು ನೋಡೋಣ. ನಾವು ಏನೂ ಮಾತನಾಡಲು ಆಗಲ್ಲ” ಎಂದು ಹೇಳಿದರು.
“ಯಾವುದೇ ಸರ್ಕಾರ ಇದ್ದರೂ ದೂರು ಕೊಟ್ಟರೆ, ದಾಖಲು ಮಾಡಿಕೊಳ್ಳಲೇಬೇಕು. ಹೀಗಾಗಿ ದೂರು ದಾಖಲಾಗಿದೆ. ತನಿಖೆ ಬಳಿಕ ಎಲ್ಲಾ ಗೊತ್ತಾಗಲಿದೆ” ಎಂದರು. ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, “ಇನ್ನೆರಡು ದಿನಗಳಲ್ಲಿ ನಮ್ಮ ಅಭ್ಯರ್ಥಿಗಳ ಹೆಸರು ಅನೌನ್ಸ್ ಆಗುತ್ತದೆ. ಎರಡು ಮೂರು ದಿನಗಳಲ್ಲಿ ಟಿಕೆಟ್ ಗೊಂದಲ ಮುಗಿಯುತ್ತದೆ” ಎಂದು ಹೇಳಿದರು.
Bigg Update: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್: ಜೈಲಿನಲ್ಲಿದ್ದ ಆರೋಪಿಯನ್ನೇ ವಶಕ್ಕೆ ಪಡೆದ NIA
ಸಂಸದ ಜೋಶಿ ಅವರ ಧಾರವಾಡದಲ್ಲಿ ಮೂರು ಲಕ್ಷ ಲೀಡ್ನಿಂದ ಗೆಲುವು ಖಚಿತ ಹೇಳಿಕೆ ವಿಚಾರದ ಕುರಿತು ಮಾತನಾಡಿ, “ಒಂದು ತಿಂಗಳು ಟಿವಿ ಆಫ್ ಮಾಡಲಿಕ್ಕೆ ಹೇಳಿ ಅವರಿಗೆ. ಟಿವಿಗಳಲ್ಲಿ ಮೋದಿಯವರ ಕಾರ್ಯಕ್ರಮಗಳನ್ನು ನೋಡುವುದನ್ನು ಬಿಡಲಿ ನೋಡೋಣ. ಆಗ ಜೋಶಿ ಅವರ ಲೀಡ್ ನೋಡೋಣ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟೈಂ ಸ್ಪೇಸ್ ಕೊಡ್ತಿಲ್ಲ. ನಮಗೂ ಟೈಂ ಸ್ಪೇಸ್ ಕೊಡಲಿ. ಇವರು ಸರ್ಕಾರದ ಹಣ ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ತಾರೆ. ಭಾರತ ಸರ್ಕಾರ 6,500 ಕೋಟಿ ಖರ್ಚು ಮಾಡಿದ್ದಾರೆ” ಎಂದು ದೂರಿದರು.