ಜಗತ್ತಿನ ಶ್ರೀಮಂತ ವ್ಯಕ್ತಿ, ಟ್ವಿಟ್ಟರ್ ಸಂಸ್ಥೆ ಮಾಲಿಕ ಎಲಾನ್ ಮಸ್ಕ್ ನನಗೆ ಹಲವಾರು ದೇಶದಲ್ಲಿ ಹಲವಾರು ಜೈವಿಕ ಮಕ್ಕಳು ಇದ್ದಾರೆ ಅಂತ ಹೇಳಿಕೊಂಡಿದ್ದಾರೆ. ವಿರ್ಯದಾನದ ಮೂಲಕ ನಾನು ಹಲವು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಸ್ವತಃ ಮಸ್ಕ್ ಹೇಳಿದ್ದರು. ಈಗ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್ ಎಸ್ಟಿ ಕ್ಲೇರ್, ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ರಿವೀಲ್ ಮಾಡಿರುವ ಆಶ್ಲೇಯ್ ಎಸ್ಟಿ ಕ್ಲೇರ್, ನಾನು ಇತ್ತೀಚೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ ಅದರ ತಂದೆ ಎಲಾನ್ ಮಸ್ಕ್ ಎಂದು ಹೇಳಿದ್ದಾರೆ.
ಐದು ತಿಂಗಳುಗಳ ಹಿಂದೆ ನಾನು ಮಗುವಿಗೆ ಜನ್ಮ ನೀಡಿದ್ದೆ ಮಗುವಿನ ಜನ್ಮದ ಖಾಸಗಿತನ ಹಾಗೂ ರಕ್ಷಣೆಗಾಗಿ ನಾನು ಇಲ್ಲಿಯವರೆಗೂ ಏನೂ ಹೇಳಿರಲಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದ್ದರಿಂದ ಹೇಳಿದ್ದೇನೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಎಲಾನ್ ಮಸ್ಕ್ ಈ ಮಗುವಿನ ತಂದೆ. ನಾನು ಈ ಹಿಂದೆ ಎಂದಿಗೂ ಕೂಡ ಇದನ್ನು ಹೇಳಿಕೊಂಡಿದ್ದಿಲ್ಲ ಕಾರಣ ಮಗುವಿನ ಖಾಸಗಿತನದ ಮೇಲೆ ಯಾವುದೇ ಪ್ರಭಾವ ಬೀರದಿರಲೆಂದು, ಆದರೆ ಈಗ ಹೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾನು ನನ್ನ ಮಗುವನ್ನು ಸುರಕ್ಷಿತ ವಾತಾವರಣದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ. ಈ ಕಾರಣದಿಂದಾಗಿಯೇ ನಾನು ಮಾಧ್ಯಮಗಳನ್ನು ಆ ಮಗುವಿನ ಖಾಸಗಿತನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿದ್ದಾರೆ.