ಬೆಂಗಳೂರು: ನನ್ನನ್ನ ಎಲ್ಲರೂ 2ನೇ ದೇವರಾಜ ಅರಸು ಅಂತಾರೆ. ಆದ್ರೆ ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Chaitra Kundapura: ಸಿಸಿಬಿ ಕಚೇರಿಯಲ್ಲಿ ಮೌನಕ್ಕೆ ಶರಣಾದ ಚೈತ್ರಾ ಕುಂದಾಪುರ
ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾರಿನಲ್ಲಿ ಓಡಾದಿದಾಕ್ಷಣ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂಬ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬಹಳ ಜನ ನನ್ನನ್ನ ದೇವರಾಜ ಅರಸು (D Devaraj Arasu) ನಂತರ ಸಾಮಾಜಿಕ ಹರಿಕಾರರು ಅಂತಾರೆ, 2ನೇ ದೇವರಾಜ ಅರಸು ಅಂತಾರೆ. ಆದ್ರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ. ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ
