ಬೆಂಗಳೂರು:- ಮುಡಾ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷ ನಾಯಕರ ಆರೋಪಕ್ಕೆ ಭೈರತಿ ಸುರೇಶ್ ಕಿಡಿಕಾರಿದ್ದು, ಯಾರು ದಾಖಲೆ ತರಲು ಆಗುತ್ತಾ ಎಂದು ತಿರುಗೇಟು ನೀಡಿದ್ದಾರೆ.
ಮಾತು ನಿಲ್ಲಿಸಿದ ಅಪರ್ಣಾ: ಕನ್ನಡಿಗರನ್ನ ನಗಿಸಿ ಮರೆಯಾದ ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿ!
20 ವರ್ಷದಿಂದ ತಪ್ಪುಗಳಾಗುತ್ತಾ ಬಂದಿದೆ. 2005ರವರೆಗಿನ ಎಲ್ಲ ವಿಚಾರ ತನಿಖೆಗೆ ಕೊಡಲು ಪ್ಲ್ಯಾನ್ ಮಾಡುತ್ತಿದ್ದೇನೆ. ಸುಮ್ಮ ಸುಮ್ಮನೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತನಿಖಾಧಿಕಾರಿನಾ ಎಂದು ಪ್ರಶ್ನಿಸಿದ್ದಾರೆ.
ಮುಡಾ ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಐಎಎಸ್ಅಧಿಕಾರಿಗಳಿಗೆ ಕೊಡದೆ ಬಿಜೆಪಿಗರಿಗೆ ಕೊಡಬೇಕಾ? ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲ್ಲ, ಸರ್ಕಾರ ಯಾರನ್ನೂ ಬಿಡಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲ ಗೊತ್ತಾಗುತ್ತೆ ಎಂದು ಟಾಂಗ್ ನೀಡಿದ್ದಾರೆ