ಬೆಂಗಳೂರು;- ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ…ಈ ಹಾಡು ಯಾರಿಗ್ ತಾನೇ ಗೊತ್ತಿಲ್ಲ ಹೇಳಿ, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಮೆಲುಕು ಹಾಕಿ ಹಾಗೆ ಮುಗುಳ್ನಗುತ್ತಾರೆ.
ಇದೀಗ ಈ ವೈರಲ್ ಹಾಡಿಗೆ ಹಸುಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಬೆಂಗಳೂರಿನ ಜನರು, ಕಸದ ಸಮಸ್ಯೆಗಳ ಬಗ್ಗೆ ಹೊಸ ಲೈನ್ಗಳನ್ನು ಸೇರ್ಪಡೆ ಮಾಡಿದ್ದಾರೆ.

ಈ ಮೂಲಕ ಸ್ವಚ್ಛತೆಯನ್ನು ಕಾಪಾಡದ ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಾನು ನಂದಿನಿ,
ಬೆಂಗಳೂರು ಬಂದಿನಿ
ಯಾರು ಊಟ ಹಾಕಲ್ಲ
ಹಾಗಾಗಿ, ಬೆಂಗಳೂರು ಕಸ ತಿನ್ನೀನಿ
ಅದ್ರೂನು ಹಾಲು ಕೊಡ್ತೀನಿ
ಎಂದು ಬರೆದುಕೊಂಡಿದ್ದಾರೆ
ಬೆಂಗಳೂರಿನಲ್ಲಿ ಮೇಯುವುದಕ್ಕೆ ಹುಲ್ಲು ಇಲ್ಲದಿದ್ದರೂ ಕಸವನ್ನೇ ತಿಂದು ರಸವನ್ನಾಗಿ ಮಾಡಿ ಹಾಲು ಕೊಡುವ ಸಾವಿರಾರು ಹಸುಗಳಿವೆ. ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನ ಹಳೆಯ ಪ್ರದೇಶವಾಗಿರುವ ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಕಾಟನ್ಪೇಟೆ, ವಿವಿಪುರಂ, ಬಿನ್ನಿಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಹಸುಗಳನ್ನು ಸಾಕಣೆ ಮಾಡಲಾಗುತ್ತದೆ. ಈ ಹಸುಗಳ ಗಂಜಲ ಮತ್ತು ಸಗಣಿಯನ್ನು ರಾಜಕಾಲುವೆಗಳಿಗೆ ಹರಿಸಲಾಗುತ್ತದೆ. ಇದರಿಂದ ಹಸುಗಳ ತ್ಯಾಜ್ಯ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಆದರೆ, ಮೇವು ಇಲ್ಲದೇ ಕಸವನ್ನು ತಿನ್ನುತ್ತವೆ ಎಂದು ಹೇಳಲಾಗಿದೆ.
