ಕಲಬುರಗಿ: ಹೆಂಡತಿ ಸೆಕ್ಸ್ ಮಾಡಲು ನಿರಾಕರಿಸಿದಳು ಎಂದು ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬಟಗೇರಾದಲ್ಲಿ ನಡೆದಿದೆ. ಮೃತ ಮಹಿಳೆ ಬೆಟಗೇರ ಗ್ರಾಮದ ನಿವಾಸಿ ನಾಗಮ್ಮ (42). ಪತಿ ಶೇಖಪ್ಪನಿಂದ ಕೊಲೆಯಾಗಿದ್ದಾಳೆ. ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ತಾನಾಗಿಯೇ ಸರೆಂಡರ್ ಆಗಿದ್ದಾನೆ. ತನಿಖೆ ನಡೆಸಿದಾಗ, ಶೇಖಪ್ಪ ರಾತ್ರಿಯಿಂದ ಎರಡು ಬಾರಿ ಸೆಕ್ಸ್ಗೆ ಒತ್ತಾಯ ಮಾಡಿದ್ದ.
Health Tips: ಸೀಮೆ ಬದನೆಕಾಯಿ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ..?
ಆದರೆ ಎರಡೂ ಬಾರಿಯೂ ಸೆಕ್ಸ್ಗೆ ನಿರಾಕರಿಸಿದ್ದಕ್ಕೆ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ಕೊಚ್ಚಿ ಹಾಕು ನೋಡೋಣ ಎಂದು ಪತ್ನಿ ಹೇಳಿದ್ದಾಳೆ. ಆಗ ಶೇಖಪ್ಪ ಕೆರಳಿ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಭಾನುವಾರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಸದ್ಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.