ಯಾದಗಿರಿ: ಅಕಾಲಿಕ ಮಳೆಗೆ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.
ಕಳೆದ 4 ದಿನಗಳಿಂದ ಸುರಿದ ಮಳೆಗೆ ನೂರಾರು ಎಕರೆ ಭತ್ತ ನೆಲಸಮವಾಗಿದೆ. ಬರಗಾಲದ ಮಧ್ಯೆಯೂ ರೈತರು ನದಿ ನೀರು ಬಳಸಿ ಭತ್ತ ಬೆಳೆದಿದ್ದರು.
ನಾಲ್ಕೈದು ದಿನಗಳ ಬಳಿಕ ಭತ್ತ ಕಟಾವು ಮಾಡುತ್ತಿದ್ದರು. ಇದೀಗ ಬೆಳೆ ನಾಶವಾಗಿದ್ದು, ಇದೀಗ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.