ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಅದರ ಮಹತ್ವ ಇರುವುದು, ಖುಶಿ ಸಿಗುವುದು ಯಾವಾಗ ಎಂದರೆ ನಾವೇ ಆಕಾಶ ಬುಟ್ಟಿ ಮಾಡಿ ಮನೆ ಮುಂದೆ ತೂಗು ಬಿಟ್ಟಾಗ. ಈ ಹಿನ್ನೆಲೆಯಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯು ಅನಂತ ಪ್ರೇರಣಾ ಕೇಂದ್ರದ ಸಹಯೋಗದೊಂದಿಗೆ ಆಕಾಶ ಬುಟ್ಟಿ ತಯಾರಿಸುವ ವಿಧಾನವನ್ನು ಕಲಿಸುವ ಶಿಬಿರ ಹಮ್ಮಿಕೊಂಡಿದೆ. ನವೆಂಬರ್ 7ರಿಂದ 9ರ ವರೆಗೆ ನಿತ್ಯ ಸಂಜೆ 4ಕ್ಕೆ ಆಕಾಶಬುಟ್ಟಿ ತಯಾರಿಕೆ ಕಲಿಸಿಕೊಡಲಾಗುವುದು.
ಇಲ್ಲಿಯ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪ ಪಕ್ಕದ ಅನಂತ ಪ್ರೇರಣಾ ಕೇಂದ್ರದ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೀಣಾ ಅಠವಲೆ ಅವರನ್ನು ಸಂಪಕಿರ್ಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸುಭಾಸ ನರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.