ಹುಬ್ಬಳ್ಳಿ: ಶಾಂತಿನಿಕೇತನ ಕಾಲೊನಿಯ ಪ್ರವೀಣ ಗಾಯಕವಾಡ, ಮಂಜುನಾಥ ಲೂತಿಮಠ ಮತ್ತು ಇತರರಿಗೆ ಅವಾಚ್ಯ ಪದಗಳಿಂದ ಬೈದು, ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಏಳು ಮಂದಿ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ಅಳಗುಂಡಗಿ, ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ಭರತ್ ಜೈನ್, ಭವೇಶ ಜೈನ್, ಲಲಿತ ಜೈನ್ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ಧ ಪ್ರವೀಣ ದೂರು ದಾಖಲಿಸಿದ್ದಾರೆ.
ಅಕ್ಕಿಹೊಂಡದ ವಿಠಲ ದೇವಸ್ಥಾನದ ಬಳಿ ಆರೋಪಿಗಳು ಬಂದು ಕರವೇ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಕುತ್ತಿಗೆ ಹಿಡಿದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.