ಹುಬ್ಬಳ್ಳಿ – ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಿಶೇಷ ಸೂಪರ್ ಫಾಸ್ಟ್ ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಹಲವು ದಿನಗಳ ಹಿಂದೆ ಈ ರೈಲನ್ನು ಪ್ರಯಾಣಿಕರ ಕೊರತೆಯಿದೆ ಎಂದು ಹೇಳಿ ರದ್ದು ಮಾಡಲಾಗಿತ್ತು, ಆದರೆ ಇದಕ್ಕೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಎಚ್ಚೆತ್ತ ರೈಲ್ವೆ ಇಲಾಖೆ ಮತ್ತೆ ಹುಬ್ಬಳ್ಳಿ ಬೆಂಗಳೂರು ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ನವೆಂಬರ್ 30ರಿಂದ ಮತ್ತೆ 07339/40 ಹುಬ್ಬಳ್ಳಿ – ಬೆಂಗಳೂರು ನಡುವೆ ಸೂಪರ್ಫಾಸ್ಟ್ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಸೇವೆಯನ್ನು ನವೆಂಬರ್ 30ರಿಂದ 2024ರ ಫೆಬ್ರವರಿ 29ರವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ. ಇದೇ
ತಿಂಗಳ ಆರಂಭದಲ್ಲಿ ಈ ಸೇವೆಗಳನ್ನು ಹಠಾತ್ ಹಿಂತೆಗೆದುಕೊಂಡ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಕೊರತೆ ಪ್ರಾಥಮಿಕ ಕಾರಣವೆಂದು ಉಲ್ಲೇಖ ಮಾಡಲಾಗಿದೆ.
07339/40 ದೈನಂದಿನ ವಿಶೇಷ ಸೇವೆಗಳ ಹಠಾತ್ ರದ್ದತಿಯು ಪ್ರಯಾಣಿಕರಿಗೆ ಆಶ್ಚರ್ಯ ಮತ್ತು ಆತಂಕವನ್ನುಂಟು ಮಾಡಿದೆ. ಅನೇಕ ಪ್ರಯಾಣಿಕರು ರೈಲ್ವೆ ಅಧಿಕಾರಿಗಳು ನೀಡಿದ ವಿವರಣೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಗಿತ್ತು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ, ರೈಲು ಭರ್ತಿಯಾಗಿದ್ದಕ್ಕೆ ಸಾಕ್ಷಿ ಒದಗಿಸಲಾಗಿತ್ತು.