ಹುಬ್ಬಳ್ಳಿ: ಭಾರತಪೇ ಸ್ಕೈಪಿಂಗ್ ಮಷಿನ್ ಪೂರೈಸಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಸಿಇಎನ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ಮೂಲದ ಮಹ್ಮದ್ ಆಸೀಫ್ (42) ಎಂಬ ಬಂಧಿತ. ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ವಿಶೇಷ ಕಾರ್ಯಾಚಾರಣೆ ಮೂಲಕ ಮೈಸೂರಿನಲ್ಲಿ ಮಹ್ಮದ್ನನ್ನು ಬಂಧಿಸಿದೆ. ಬಂಧಿತನಿಂದ 2 ಭಾರತಪೇ ಸ್ಕೈಪಿಂಗ್ ಮಷಿನ್, 2 ಮೊಬೈಲ್ ಫೋನ್, 1 ಎಸ್ಬಿಐ ಎಟಿಎಂ ಕಾರ್ಡ್ ವಶಕ್ಕೆ ಪಡೆದುಕೊಂಡಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಇನ್ನಿತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.