ಫಾಸ್ಟ್ ಟ್ಯಾಗ್ ಸಹಾಯದಿಂದ ಬೆಂಗಳೂರಿನಲ್ಲಿ ಕಳವು ಆದ ಕಾರು ಹುಬ್ಬಳ್ಳಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಡಿಸೆಂಬರ್ 28 ರಂದು ಹೆಚ್ಎಸ್ಆರ್ ಲೇಔಟ್ನಲ್ಲಿ ಕಿಟಕಿ ಗ್ಲಾಸ್ ಒಡೆದು ಕಳ್ಳರು ಕಾರನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಉದ್ಯಮಿ ಶ್ರೀನಿವಾಸರೆಡ್ಡಿ ಎಂಬವರ ಕಾರು ಇದಾಗಿದ್ದು, ಈ ಸಂಬಂಧ ಹೆಚ್ಎಸ್ಆರ್ ಲೇಔಟ್ಠಾಣೆಯಲ್ಲಿ ಕಾರಿನ ಮಾಲೀಕರು ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು, ಫಾಸ್ಟ್ ಟ್ಯಾಗ್ ನ ಸಹಾಯದಿಂದ ಕಾರನ್ನು ಪತ್ತೆ ಹಚ್ಚಿದ್ದಾರೆ. ಟೋಲ್ ಪಾಸ್ ಆಗುವ ವೇಳೆ ಕಾರಿನ ಮಾಲೀಕನಿಗೆ ಬಂದ ಮೆಸೇಜ್ ನಿಂದ ಕಾರು ಪತ್ತೆ ಆಗಿದ್ದು, ಸದ್ಯ ಪೊಲೀಸರು ಹುಬ್ಬಳ್ಳಿಯಿಂದ ಕಾರು ತಂದು ಮಾಲೀಕರಿಗೆ ಹಿಂದುರುಗಿಸಿದ್ದಾರೆ. ಕಾರು ಪತ್ತೆಯಾದ್ರು ಕಳ್ಳನ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಈ ಸಂಬಂಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
