ಸಾಮಾನ್ಯವಾಗಿ “ಅಮರತ್ವದ ಸಸ್ಯ” ಅಂತ ಸಹ ಕರೆಯಲ್ಪಡುವ ಅಲೋವೆರಾ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಮುಖ್ಯವಾದ ಪರಿಹಾರವಾಗಿದೆ. ಈ ತಿರುಳಿರುವ ಸಸ್ಯದ ಪ್ರಯೋಜನಗಳು ಇತರ ಗಿಡಮೂಲಿಕೆಗಳ ಪ್ರಯೋಜನಗಳನ್ನು ಮೀರಿಸುತ್ತದೆ ಅಂತಾನೆ ಹೇಳಬಹುದು.
ಹೌದು ನಿಮ್ಮ ಮನೆಯ ಹಿತ್ತಲಿನಲ್ಲೇ ಸಿಗುವ ಅಲೋವೆರಾದಲ್ಲಿ ಸಾಕಷ್ಟು ಪೋಷಕಾಂಶಗಳು ಇದೆ. ಇದು ಕೂದಲಿಗೆ ನೈಸರ್ಗಿಕ ಬಣ್ಣ ನೀಡುವುದಷ್ಟೇ ಅಲ್ಲ, ಕೂದಲನ್ನು ಬುಡದಿಂದ ಗಟ್ಟಿಯಾಗಿಸಿ, ಕಾಂತಿಯನ್ನು ನೀಡುತ್ತದೆ.
ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ಯುವಕ- ಯುವತಿಯರಲ್ಲಿ ಅತೀ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆಯನ್ನ ಎದುರಿಸುತ್ತಿರುತ್ತದೆ. ಹಲವಾರು ರೀತಿಯ ಪೋಷಕಾಂಶಗಳ ಕೊರತೆ ಇರುತ್ತದೆಯೋ ಅವರಲ್ಲಿ ಬಿಳಿ ಕೂದಲಿನ ಸಮಸ್ಯೆ ಅಧಿಕವಾಗಿ ಕಾಣುತ್ತಿರುತ್ತದೆ. ಇಂದು ನಾವು ಹೇಳುವ ಮನೆಮದ್ದು ಬಿಳಿಯಾಗಿರುವ ಕೂದಲನ್ನು ಥಟ್ ಅಂತ ಕಪ್ಪಾಗಿಸುತ್ತೆ.
ಅಲೋವೆರಾದೊಂದಿಗೆ ಮೆಂತ್ಯ ಬೀಜಗಳು, ಕಪ್ಪು ಜೀರಿಗೆಯನ್ನು ಬಳಸುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಶಾಶ್ವತವಾಗಿ ಕಪ್ಪಾಗಿಸಬಹುದು. ತಾಜಾ ಅಲೋವೆರಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇದರಲ್ಲಿ ಒಂದು ಸ್ಪೂನ್ ಮೆಂತ್ಯ ಕಾಳುಗಳು ಹಾಗೂ ಒಂದು ಸ್ಪೂನ್ ಕಪ್ಪು ಜೀರಿಗೆಯನ್ನು ಹಾಕಿ ಒಂದು ಓಟ ನೀರು ಹಾಕಿ. ನೀರು ಅರ್ಧವಾಗುವವರೆಗೂ ಚೆನ್ನಾಗಿ ಕುದಿಸಿ. ನೀರು ತಣ್ಣಗಾದ ಬಳಿಕ ಇದನ್ನು ಶೋಧಿಸಿ ಸ್ಪ್ರೇ ಬಾಟಲಿನಲ್ಲಿ ಹಾಕಿಡಿ. ಈ ರೀತಿ ತಯಾರಿಸಿಟ್ಟ ಸ್ಪ್ರೇ ಅನ್ನು ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿ. ಆದರೆ, ನನಪಿಡಿ, ಹೇರ್ ವಾಶ್ ಆಗಿ ಚೆನ್ನಾಗಿ ಒಣಗಿದ ಮೇಲೆ ಈ ಸ್ಪ್ರೇ ಅನ್ನು ಕೂದಲಿಗೆ ಅನ್ವಯಿಸಬೇಕು. ವಾರಕ್ಕೆ ಒಂದೆರಡು ಬಾರಿ ಈ ಹೇರ್ ಸ್ಪ್ರೇ ಅನ್ನು ಕೂದಲಿಗೆ ಬಳಸುವುದರಿಂದ ಬಿಳಿ ಕೂದಲು ಕೆಲವೇ ವಾರಗಳಲ್ಲಿ ಶಾಶ್ವತ ಕಪ್ಪು ಬಣ್ಣಕ್ಕೆ ತಿರುಗುತ್ತದೆ.