ಕೇರಳದ (Kerala) ಮೇಲೆ ನಿಸರ್ಗಮಾತೆ ಮುನಿಸಿಕೊಂಡಿದ್ದಾಳೆ. ವಯನಾಡಿನಲ್ಲಿ (Wayanad) ಮುಂಡಕ್ಕೈ, ಚುರಲ್ಮಲದಲ್ಲಿ ಸಂಭವಿಸಿದ ದುರಂತದಿಂದ ಆಸ್ತಿಪಾಸ್ತಿ ಹಾನಿ, ಪ್ರಾಣಹಾನಿ ವರದಿಯಾಗುತ್ತಲೇ ಇದೆ.ಜನ ತಮ್ಮನ್ನು ತಾವು ಸುರಕ್ಷಿತ ನೆಲೆಗಳಿಗೆ ಪಾರು ಮಾಡಿಕೊಳ್ಳಲು ಹೋರಾಡುತ್ತಿರುವ ದೃಶ್ಯಗಳಂತು ಎದೆ ಝಲ್ ಎನಿಸುತ್ತಿವೆ. ಕೇಂದ್ರ ಹಾಗೂ ರಾಜ್ಯಗಳ ನೈಸರ್ಗಿಕ ವಿಕೋಪ ನಿರ್ವಹಣಾ ಪಡೆಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆ ಯೋಧರು ಜೀವ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದವರನ್ನ ಹುಡುಕಿ ಮೇಲಕ್ಕೆತ್ತಿದ್ದಾರೆ. ಮಣ್ಣಿನಡಿ ಜೀವ ಬಿಟ್ಟವರನ್ನ ಭೂಮಿ ಬಗೆದು ಹೊರಕ್ಕೆ ತೆಗೆಯುತ್ತಿದ್ದಾರೆ. ಇನ್ನೂ ಕಣ್ಣಿಗೆ ಕಾಣದ ಅದೆಷ್ಟೋ ಶವಗಳು ಮಣ್ಣಿನಲ್ಲಿ ಊತು ಹೋಗಿವೆ. ಸತತ 9ನೇ ದಿನವೂ ಸೇನಾ (Army) ಕಾರ್ಯಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ
ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಅತ್ಯಂತ ಸೂಕ್ಷ್ಮ ಪರ್ವತ ಸಾಲುಗಳಲ್ಲಿ ಒಂದು. ಇದು ಇಡೀ ದಖ್ಖನ್ ಪ್ರಸ್ಥಭೂಮಿಯ ಜೀವಸೆಲೆ ಇಡೀ ಭರತ ಖಂಡದ ಹವಾಮಾನ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪೂರ್ವ ಹಿಮಾಲಯವನ್ನು ಬಿಟ್ಟರೆ ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ 2ನೇ ಭಂಡಾರವಾಗಿದೆ. ಜಗತ್ತಿನ 8 ಜೀವ ವೈವಿಧ್ಯತೆಯ ಸೂಕ್ಷ್ಮ ಪರಿಸರ ತಾಣಗಳಲ್ಲಿ ಪಶ್ಚಿಮ ಘಟ್ಟವನ್ನು ಒಂದು ಪ್ರಮುಖ ತಾಣವೆಂದು ಪರಿಗಣಿಸಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ಭಾರತವನ್ನ ಕಾಡಿದ ಭೂಕುಸಿತಗಳು ನಮ್ಮ ಕಣ್ಣಿಗೆ ಕಟ್ಟಿದಂತಿವೆ. ಕೇರಳದ ವಯನಾಡಿನ ಕಳೆದ ಜುಲೈ 30 ರಂದು ಸಂಭವಿಸಿದ ಭೂಕುಸಿತ, ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಉಂಟಾದ ಗುಡ್ಡ ಕುಸಿತ ದುರಂತ ಹಾಗೂ 2018ರಲ್ಲಿ ಸಂಭವಿಸಿದ ಕೊಡಕು ಭೂಕುಸಿತ ಇಡೀ ದಕ್ಷಿಣ ಭಾರತದ ಜನರ ಕಣ್ಣಿಗೆ ಕಟ್ಟಿದಂತಿವೆ.
Land Slides: ಈ ವರ್ಷ ಕರ್ನಾಟಕದಲ್ಲಿ ಎಷ್ಟು ಕಡೆ ಭೂಕುಸಿತ ಆಗಿದೆ ಗೊತ್ತಾ: ಇಲ್ಲಿದೆ ಡಿಟೇಲ್ಸ್!
2018ರ ಆಗಸ್ಟ್ 13 ರಿಂದ 17ರ ತನಕ ಕೊಡಗು (Kodagu) ಅಕ್ಷರಶಃ ತತ್ತರಿಸಿ ಹೋಗಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಅನೇಕ ಕಡೆಗಳಲ್ಲಿ ಮಹಾಮಳೆ ಸುರಿದ ಬೆನ್ನಲ್ಲೇ ಬೆಟ್ಟಗಳು ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಸಾವಿರಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದರು. ಹಲವರು ಜೀವ ಕಳೆದುಕೊಂಡರು. ಬೆಟ್ಟ ಕುಸಿತದಿಂದ ತೋಟಗಳೂ ನಾಶವಾಗಿ ಜನರ ಬದುಕನ್ನೇ ಮೂರಾಬಟ್ಟೆ ಮಾಡಿಬಿಟ್ಟಿತು. ಅಂದಿನ ದುರಂತದಲ್ಲಿ 20 ಜನ ಸಾವನ್ನಪ್ಪಿದರು, 4,056 ಮನೆಗಳಿಗೆ ಹಾನಿಯಾಯಿತು ಮತ್ತು ಕೊಡಗಿನಲ್ಲಿ 18,000 ಜನರನ್ನು ಸ್ಥಳಾಂತರಿಸಲಾಗಿತ್ತು.
ಕೇರಳಕ್ಕೆ ಪ್ರವಾಹ ಅಪ್ಪಳಿಸಿರುವುದು ಇದೇ ಮೊದಲೇನಲ್ಲ. 2019ರ ಆಗಸ್ಟ್ 6ರಂದು ಪುತ್ತುಮಲ ಸಮೀಪದಲ್ಲಿ ಭೂಕುಸಿತ ಉಟಾಗಿ 17 ಜನ ಸಾವಿಗೀಡಾಗಿದ್ದರು. ಈ ಪೈಕಿ ಐವರ ಮೃತದೇಹಗಳು ಪತ್ತೆಯಾಗಲೇ ಇಲ್ಲ. 65 ಮನೆಗಳು ಸಂಪೂರ್ಣ ಹಾನಿಗೆ ಒಳಗಾದವು. ಆದ್ರೆ ಇದಕ್ಕೂ ಮುನ್ನ ಕೇರಳದಲ್ಲಿ 2018ರಲ್ಲಿ ಕೇರಳ ಶತಮಾನಗಳಲ್ಲೇ ಅತೀ ಭೀಕರ ಪ್ರವಾಹವೊಂದನ್ನು ಎದುರಿಸಿತ್ತು. ಸುಮಾರು 483 ಮಂದಿ ಜೀವ ಕಳೆದುಕೊಂಡಿದ್ದರು. ವ್ಯಾಪಕ ಹಾನಿಯನ್ನುಂಟುಮಾಡಿತ್ತು ಈ ಪ್ರವಾಹ.
ಜುಲೈ 15 ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಈ ದುರ್ಘಟನೆಯಲ್ಲಿ ಹಲವಾರು ಜನ ಮೃತಪಟ್ಟಿದ್ದರು. ಹಲವರ ಶವವನ್ನು ಪತ್ತೆ ಮಾಡಿ ಹೊರತೆಗೆಯಲಾಗಿತ್ತು. ಇನ್ನು ಹಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ತೇಲಿ ಹೋಗಿರಬಹುದೂ ಎಂಬ ಅನುಮಾನ ಇದೆ. ಈ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.