ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಮಾಲೆ ಹಾಕ್ಕೊಂಡಿದ್ದಾರೆ. ‘ಸ್ವಾಮಿಯೇ ಅಮಿತ್ ಶಾ ಅಪ್ಪ’ ಅಂತ ಹೇಳ್ತಾರೆ. ಸಿ.ಟಿ. ರವಿನೂ ಫ್ರೀ ಇದ್ದಾನೆ, ಕರ್ಕೊಂಡ್ ಹೋಗಿ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕುಟುಕಿದರು.
Onion Price Hike: ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ: 1 ಕೆಜಿಗೆ ಬೆಲೆ ಕೇಳಿದ್ರೆ ಫುಲ್ ಶಾಕ್!
ಬೆಂಗಳೂರಿನಲ್ಲಿ ಸಭೆ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ. ನನ್ನನ್ನ ತೆಗೆದಿದ್ದು ತಪ್ಪು, ನ್ಯಾಯಾಲಯಕ್ಕೆ ಹೋಗುತ್ತೇನೆ. ಯಾರನ್ನು ಕೇಳದೆಯೇ ಅಮಿತ್ ಶಾ ಬಳಿ ಹೋಗಿದ್ದಕ್ಕೆ ಕುಮಾರಸ್ವಾಮಿ ಅವರನ್ನ ತೆಗೆಯಬೇಕಿತ್ತು. ಒಬ್ಬ ಮಗನಿಗೆ ಎಷ್ಟು ಜನರನ್ನ ಬಲಿ ಕೊಡಬೇಕು? ದಸರಾ ಆದ್ಮೇಲೆ ಕರಿತೀನಿ ಅಂದ್ರು ಕರೆದ್ರಾ? ವಿಜಯೇಂದ್ರ, ಆರ್. ಅಶೋಕ್ ಮುಂದೆ ಕುಮಾರಸ್ವಾಮಿ ಕೈ ಕಟ್ಟಿ ನಿಲ್ಲಬೇಕಾ? ಬಿಜೆಪಿಗರಿಗೆ ಬೇಕಿಲ್ಲ, ಇವರೇ ಮೈ ಮೇಲೆ ಬಿದ್ದು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.