ಚಪಾತಿಗಳಲ್ಲಿ ಕೇವಲ ಕಾರ್ಬೋಹೈಡ್ರೇಟುಗಳು ಮಾತ್ರವಲ್ಲ ಇತರ ಅಗತ್ಯ ಪೋಷಕಾಂಶಗಳೂ ಸಮೃದ್ಧವಾಗಿವೆ. ಗೋಧಿಯಲ್ಲಿ ಪ್ರೋಟೀನ್, ಕೊಬ್ಬು, ರಂಜಕ, ಮೆಗ್ನೀಸಿಯಮ್, ಫೋಲೇಟ್ ಮತ್ತು ಕಬ್ಬಿಣದ ಅಂಶಗಳು ಉತ್ತಮ ಪ್ರಮಾಣದಲ್ಲಿವೆ. ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು ಮತ್ತು ಕೊಬ್ಬನ್ನು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಎಂದು ಕರೆಯಲಾಗುತ್ತದೆ,
ಅಂದರೆ ದೇಹದಲ್ಲಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸಲು ನಮ್ಮ ದೇಹಕ್ಕೆ ಇವು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ತೂಕ ಇಳಿಸುವ ಪ್ರಯತ್ನದಲ್ಲಿ ಮೊದಲನೆಯದಾಗಿ, ನಿಮ್ಮ ದೈನಂದಿನ ಕಾರ್ಬೋಹೈಡ್ರೇಟುಗಳ ಸೇವನೆಯನ್ನು ನೀವು ಅಗತ್ಯಕ್ಕೆ ತಕ್ಕಷ್ಟೇ ಸೇವಿಸಬೇಕಾಗುತ್ತದೆ. ಅದರ ಆಧಾರದ ಮೇಲೆ ನೀವು ದಿನದಲ್ಲಿ ಎಷ್ಟು ಚಪಾತಿಗಳನ್ನು ಸೇವಿಸಬಹುದು ಎಂಬುದನ್ನು ನಿರ್ಧರಿಸಬಹುದು.
- ಮಹಿಳೆಯರು ದಿನಕ್ಕೆ ನಾಲ್ಕು ರೊಟ್ಟಿ ತಿನ್ನಬಹುದು. ಅಂದ್ರೆ ಮಧ್ಯಾಹ್ನ 2 ಮತ್ತು ರಾತ್ರಿ ಎರಡು ಚಪಾತಿ ತಿನ್ನಬಹುದು.
- ಪುರುಷರು ದಿನಕ್ಕೆ ಆರರಿಂದ 8 ರೊಟ್ಟಿ ತಿನ್ನಬಹುದು. ಮಧ್ಯಾಹ್ನ ಮತ್ತು ರಾತ್ರಿ ತಲಾ ಮೂರರಂತೆ ತಿನ್ನಬಹುದು. ನೀವು ಹೆಚ್ಚು ಭಾರದ ಕೆಲಸ ಮಾಡುತ್ತಿದ್ರೆ ರೊಟ್ಟಿಗಳ ಪ್ರಮಾಣ ಹೆಚ್ಚಬಹುದು. ಕೆಲವರು ಬೆಳಗ್ಗೆ ತಿಂಡಿಗೂ ಚಪಾತಿ ಬೇಕು ಎಂದು ಕೇಳುತ್ತಾರೆ.
- ರಾತ್ರಿ ಚಪಾತಿ ಬೇಗ ಜೀರ್ಣ ಆಗಲ್ಲ. ಆದ್ದರಿಂದ ಎರಡು ಚಪಾತಿ ತಿನ್ನೋದು ಉತ್ತಮ. ಅತಿಯಾಗಿ ಚಪಾತಿ ತಿಂದ್ರೆ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.
- ನೀವು ರಾತ್ರಿ ಚಪಾತಿ ತಿಂದ್ರೆ ಕನಿಷ್ಠ ಅರ್ಧ ಗಂಟೆ ವಾಕ್ ಮಾಡೋದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಳವಾಗುತ್ತದೆ. ರಾತ್ರಿ ಚಪಾತಿ ತಿಂದ ನಂತರ ದಿಢೀರ್ ನಿದ್ದೆಗೆ ಜಾರಬೇಡಿ.
ಕೇವಲ ನಿಮ್ಮ ಕಾರ್ಬೋಹೈಡ್ರೇಟುಗಳ ಸೇವನೆಯನ್ನು ಮಾತ್ರ ಸೀಮಿತಗೊಳಿಸುವುದರಿಂದ ನಿಮ್ಮ ತೂಕ ಇಳಿಸುವ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಜೀವನಶೈಲಿಯ ಅಭ್ಯಾಸಗಳು, ಮಲಗುವ ಕ್ರಮಗಳು ಮತ್ತು ವ್ಯಾಯಾಮದ ದಿನಚರಿ ಇವೆಲ್ಲವೂ ತೂಕ ಇಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಇತರ ಅಂಶಗಳಾಗಿವೆ. ಪರಿಣಾಮಕಾರಿ ತೂಕ ಇಳಿಕೆಗೆ, ಈ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ.