ವಿಜಯನಗರ : ಇದೇ ಮಾರ್ಚ್ 21ರಿಂದ ಏಪ್ರಿಲ್ 04 ವರೆಗೂ ಎಸ್ ಎಸ್ ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಈ ವರ್ಷ ವಿಜಯನಗರದಲ್ಲಿ 22,700 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಇನ್ನೂ ಪರೀಕ್ಷಾ ಸಿದ್ದತೆ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಸುದ್ದಿಗೋಷ್ಠಿ ನಡೆಸಿದ್ದು, ಜಿಲ್ಲಾದ್ಯಾಂತ 71 ಪರೀಕ್ಷಾ ಕೇಂದ್ರಗಳಿದ್ದು, 962 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಪಾರದರ್ಶಕತೆ ಪರೀಕ್ಷೆ ನಡೆಸುವ ಸಲುವಾಗಿ ಆನ್ ಲೈನ್ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಮೊಬೈಲ್ ಪೋನ್, ಕ್ಯಾಲ್ಕುಲೇಟರ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ನಿಷೇಧ ಹೇರಲಾಗಿದೆ.
ಈ ವರ್ಷದಲ್ಲಿ ಹೊಸ ವಿದ್ಯಾರ್ಥಿಗಳು 21,429 ಪುನಾರಾವರ್ತಿತ 1,271 ವಿದ್ಯಾರ್ಥಿಗಳಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ 6,611 ವಿದ್ಯಾರ್ಥಿಗಳನ್ನ ಗುರುತಿಸಿ ಪ್ರತ್ಯೇಕ ತರಬೇತಿ ನೀಡಲಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದಲ್ಲಿ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಶೌಚಾಲಯ ಮತ್ತು ಫ್ಯಾನ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ಷದಲ್ಲಿ 210 ದಿನಗಳು ಮಕ್ಕಳು ಕಡ್ಡಾಯವಾಗಿ ಹಾಜರಾತಿ ಇರಬೇಕು. ಜಿಲ್ಲಾದ್ಯಾಂತ ಹಾಜರಾತಿ ಇಲ್ಲದೇ ಪರೀಕ್ಷೆಯಿಂದ 1,764 ಮಕ್ಕಳು ಹೊರಗುಳಿದಿದ್ದಾರೆ. ಜಿಲ್ಲಾದ್ಯಾಂರ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.