ಬೀದರ್: ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿಂಬೂರು ಸರಕಾರಿ ಶಾಲೆ ನಿಂಬೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
Stress; ಗ್ಯಾರಂಟಿ ಯೋಜನೆ ಆಧಾರ್ ಲಿಂಕ್ ಕಣ್ಣಿರೀಟ್ಟ ಕಂಪ್ಯೂಟರ್ ಆಪರೇಟರ್ – ಕೆಲಸ ಬೇಡ್ವೆ ಬೇಡ

ವಿದ್ಯಾರ್ಥಿಗಳಿಗೆ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು ಡಾ.ಸಿದ್ದಲಿಂಗಪ್ಪ ಪಾಟೀಲ, ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಭೇಟಿ ನೀಡಿ ವೈದ್ಯರ ಬಳಿ ಈ ಬಗ್ಗೆ ಮಾಹಿತಿ ಕಲೆ ಹಾಕಿದರು.
ವೈದ್ಯರ ಬಳಿ ನಾನು ಮಾತನಾಡಿದ್ದೇನೆ, ಪೋಷಕರು ಯಾರೂ ಆತಂಕಪಡುವುದು ಬೇಡ ಎಂದು ಧೈರ್ಯ ತುಂಬಿದರು.
ಊಟದ ವ್ಯತ್ಯಾಸದಲ್ಲಿ ಏರುಪೇರು ಆಗಿದ್ದರಿಂದ ಈ ಸಮಸ್ಯೆ ಆಗಿದೆ. ಭಯಪಡುವ ಯಾವುದೇ ಸಮಸ್ಯೆ ಇಲ್ಲ ಬೇಗ ಗುಣಮುಖರಾಗಲಿದ್ದಾರೆ ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾಹಿತಿ.
