ಪೀಣ್ಯ ದಾಸರಹಳ್ಳಿ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯ ಅಕಾಡೆಮಿ ಹಾಗೂ ಇಚ್ಚಾ ಫೌಂಡೇಶನ್ ಸಹಯೋಗದೊಂದಿಗೆ ತಮಿಳುನಾಡಿನ ಹೊಸೂರು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಸಮಾರಂಭ ಜರುಗಿತು.
ಮ್ಯೆಸೂರಿನ ಅರ್.ಭಾಗ್ಯ ಅವರ ಸಂಘಟನಾ ಕೌಶಲ್ಯ ಹಾಗೂ ಸಮಾಜ ಸೇವೆ ಮತ್ತು ವರ್ಷಿತಾ ಸೇವಾ ಪೌಂಡೇಶನ್ ಸಂಸ್ಥೆ ಕರುನಾಡ ರಕ್ಷಣಾ ಪರಿಷತ್ ಯಲ್ಲಿನ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಅವರು ‘ನನ್ನ ಸ್ನೇಹಿತರ ಹಾಗೂ ಹಿತೈಷಿಗಳ ಸಹಕಾರದಿಂದ ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಈ ನನ್ನ ಸೇವೆ ಮುತ್ತು ಸಂಘಟನೆಯಲ್ಲಿನ ಕಾರ್ಯಗಳನ್ನು ಹಾಗೂ ಸೇವೆಯನ್ನು ಗುರುತಿಸಿ ವಿವಿಧ ಆಯಾಮಗಳನ್ನ ಮಾಡಿ ಸಮಾಜದಲ್ಲಿನ ಹೋರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯವರು ನನಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ತುಂಬಾ ಖುಷಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡಿ ಅವರ ಉನ್ನತಿಗೆ ದುಡಿಯುತ್ತೇನೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಏಷ್ಯಾ ಇಂಟರ್ನಾಷನಲ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ರಾದ ಬಾಬು ವಿಜಯನ್ ,
ಕರುನಾಡ ರಕ್ಷಣಾ ಪರಿಷತ್ ರಾಜ್ಯ ಉಪಾದ್ಯಕ್ಷ
ಅನಂದ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಅಪ್ರೋಸ್ ಪಾಷ , ಜಾವಿದ್ , ರವಿಕುಮಾರ್ ಇನ್ನೂ ಮುಂತಾದವರು ಇದ್ದರು.