ಕಲಬುರಗಿ: ಹತ್ತು ಮ್ಯಾಚ್ ಗೆದ್ದಿರುವ ಭಾರತ ಫೈನಲ್ ಮ್ಯಾಚ್ ಗೆಲ್ಲಲೇಬೇಕು..ಹೀಗಂತ ಸಂಕಲ್ಪ ಮಾಡಿರುವ ಹಿಂದೂ ಜಾಗೃತ ಸೇನೆ ಇವತ್ತು ಹೋಮ ಹವನ ಮಾಡಿ ಪ್ರಾರ್ಥಿಸಿತು.
ನಗರದ ಅಳಂದ ರಸ್ತೆಯಲ್ಲಿರುವ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹೋಮ ಹವನ ನಡೆಸಿತು..ಹಿಂದೂ ಸೇನೆ ಕಾರ್ಯಕರ್ತರು ಟೀಂ ಇಂಡಿಯಾ ಫೋಟೋ ಹಿಡಿದು ಹೋಮ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು..


