ರಾಮನಗರ: ಕರ್ನಾಟಕ ಉಪ ಕದನದ ಕುರುಕ್ಷೇತ್ರ ರಂಗೇರುತ್ತಿದೆ. ನಾಡಿನ ನಾಡಿಮಿಡಿತ ಏನು ಅನ್ನೋ ಚಿತ್ರಣ ಕಟ್ಟಿಕೊಡುವ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. 136 ಕ್ಷೇತ್ರಗಳನ್ನ ಗೆದ್ದು ಬೀಗುತ್ತಿರುವ ಕಾಂಗ್ರೆಸ್.
ಉಪಕದನದಲ್ಲಿ ಮೂರೂ ಕ್ಷೇತ್ರಗಳನ್ನ ಗೆದ್ದು ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ಹಠಕ್ಕೆ ಬಿದ್ದಿದೆ. ಈ ನಿಟ್ಟಿನಲ್ಲಿ ಸಿಪಿ ಯೋಗೇಶ್ವರ್, ಚುನಾವಣೆ ಗೆಲ್ಲಲು ಆಂಜನೇಯನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಹೊಳೆ ಆಂಜನೇಯ ಸ್ವಾಮಿಗೆ ಹರಕೆ ಕಟ್ಟಿದ್ದಾರೆ.
Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ
ಚನ್ನಪಟ್ಟಣ ಉಪಚುನಾವಣೆ ಕನಕ್ಕೆ ಇವತ್ತು ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಚನ್ನಪಟ್ಟಣದ ತಗಟೆಗೆರೆ ಪ್ರಚಾರ ಆರಂಭಿಸಿದ್ದಾರೆ. ತಗಚಗೆರೆಯಲ್ಲಿ ಸಿಪಿ ಯೋಗೇಶ್ವರ್ ಪರ ಡಿಸಿಎಂ ಡಿಕೆ, ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ವೆಂಕಟೇಶ್ ಪ್ರಚಾರ ನಡೆಸಿದ್ದಾರೆ. ದೋಸ್ತಿಗಳ ವಿರುದ್ಧ ಅಬ್ಬರಿಸಿದ್ದಾರೆ.