ರಾಮನಗರ: ಕೊರೊನಾ ಹೆಚ್ಚಳದಿಂದಾಗಿ ಜನರ ಹಿತದೃಷ್ಟಿಯಿಂದಾಗಿ ಮೇಕೆದಾಟು ಪಾದಯಾತ್ರೆಯನ್ನು ರದ್ದು ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಪಕ್ಷದ ನಾಯಕರ ಜೊತೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತೀರ್ಮಾನದಂತೆ ಜ.9ರಂದು ಸಂಗಮದಿಂದ ಪ್ರಾರಂಭ ಆಯ್ತು. ನಮ್ಮ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಿತ್ತು. ಕೋವಿಡ್ ವೇಗವಾಗಿ ಹರಡುತ್ತಿದೆ. ಇದರಿಂದ ಮೊಟಕುಗೊಳಿಸಿದ್ದೇವೆ.
ಕೊರೊನಾ ಸೋಂಕು ಕಡಿಮೆ ಆದಮೇಲೆ ಮತ್ತೇ ರಾಮನಗರದಿಂದಲೇ ಪಾದಯಾತ್ರೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯ ಮಾಡಿ 4 ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸುಗಳಿಸಿದ್ದೇವೆ. ಬಹಳ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ. ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದಾಗ ಮೂರನೇ ಅಲೆ ಪ್ರಾರಂಭ ಆಗಿರಲಿಲ್ಲ. ನಾವು ಇದನ್ನ ಎರಡು ತಿಂಗಳ ಮುಂಚೆಯೇ ತೀರ್ಮಾನ ಮಾಡಿದ್ದೇವು ಎಂದರು.
