ಬೆಂಗಳೂರು: ಹಿಜಾಬ್ ನಿಷೇಧ ವಾಪಸ್ ಬಗ್ಗೆ ಸಿಎಂ ಹೇಳಿಕೆ ವಿಚಾರ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ನಿಷೇಧ ಅನ್ನೋದು ಪ್ರಶ್ನೆಯೇ ಇಲ್ಲ ಎಲ್ಲಿ ಡ್ರೆಸ್ ಕೋಡ್ ಇದ್ಯೋ ಅಲ್ಲಿ ಹಿಜಾಬ್ ಇಲ್ಲ ಹಿಜಾಬ್ ನಿಷೇಧ ಆಗಿಲ್ಲ ಎಲ್ಲ ಮಾರ್ಕೆಟ್ ನಲ್ಲಿ ಹಾಕ್ತಾರೆ,ಅಧಿವೇಶನದಲ್ಲಿ ಹಾಕ್ಕೊಂಡು ಬರ್ತಾರೆ ಈ ಹಿಂದೆ ಇದ್ದ ಡ್ರೆಸ್ ಕೋಡ್ ಇದೆ ಹೈಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿದೆ ಸುಪ್ರೀಂ ಕೋರ್ಟ್ ನಲ್ಲಿ ಇಬ್ಬರು ನ್ಯಾಯಾಧೀಶರು ಬೇರೆ ಬೇರೆ ಆದೇಶ ಕೊಟ್ಟಿದ್ದರು ಇದೀಗ ಸುಪ್ರೀಂ ಸಿಜೆ ತ್ರಿಸದಸ್ಯ ಪೀಠ ರಚನೆ ಮಾಡಿದ್ದಾರೆ
BS Yadiyurappa: ಕಾಂಗ್ರೆಸ್ ಸರ್ಕಾರ ಒಂದು ಭಂಡ ಸರ್ಕಾರ: ಯಡಿಯೂರಪ್ಪ ಕಿಡಿ!
ಹಿಜಾಬ್ ನಿಷೇಧ ವಿಷಯವೇ ಇಲ್ಲ ಈ ವಿಚಾರವನ್ನ ಸಿಎಂ ರಾಜಕೀಯ ಮಾಡ್ತಿದ್ದಾರೆ ಇದನ್ನ ನಾನು ಖಂಡಿಸುತ್ತೇನೆ ಬೆಳಗಾವಿ ಅಧಿವೇಶನ ನಡೆಯುವಾಗ ಹುಬ್ಬಳ್ಳಿ ಮುಸ್ಲಿಂ ಸಮಾವೇಶಕ್ಕೆ ಹೋಗಿ ಹತ್ತು ಸಾವಿರ ಕೋಟಿ ಕೊಡ್ತೀನಿ ಎಂದಿದ್ದರು ವಿಷಯಂತರ ಮಾಡಲು ಪ್ರಯತ್ನ ಮೈನಾರಿಟಿ ಓಲೈಕೆ ಮಾಡಲು ಪ್ರಯತ್ನ ಎಂದು ಕಿಡಿಕಾರಿದ್ದಾರೆ.
ಅಂದ ಹಾಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಅವರ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಕುತಂತ್ರ ಈ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ತಿರುಗಬಾಣವಾಗಲಿದೆ ಎಂದರು