ಹಣ್ಣು ಹಣ್ಣಾದ ಸೀಬೆ ಹಣ್ಣು ತಿಂದವರಿಗೆ ಗೊತ್ತು! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚಾಗಿರುವ ಈ ಹಣ್ಣಿನ ಮರ ಹಳ್ಳಿಕಡೆ ತುಂಬಾನೇ ನೋಡಲು ಸಿಗುತ್ತದೆ. ಆದರೆ ನಿಮಗೆ ಗೊತ್ತಿರಬಹುದು ನಾವೆಲ್ಲರೂ ಈ ರಸಭರಿತವಾದ ಸೀಬೆ ಹಣ್ಣುಗಳ ರುಚಿ ಆನಂದಿಸಿ ಎಲೆಗಳನ್ನು ನಿರ್ಲಕ್ಷಿಸಿ ಎಸೆಯುತ್ತಾರೆ.
ಆದರೆ ಸೇಬೆ ಎಲೆಗಳೂ ಔಷಧೀಯ ಗುಣಗಳಿಂದ ತುಂಬಿವೆ. ಅನೇಕ ಕಾಯಿಲೆಗಳಿಗೆ ಉತ್ತಮ ಮನೆಮದ್ದು ಎಂದು ಅನೇಕರಿಗೆ ತಿಳಿದಿಲ್ಲ.
ಇಂದಿನ ದಿನಮಾನಗಳಲ್ಲಿ ಅನೇಕ ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ.. ಇದಕ್ಕಾಗಿ ಹಲವಾರು ಮದ್ದುಗಳನ್ನು ಟ್ರೈ ಮಾಡಿ ಯಾವುದೇ ಫಲಿತಾಂಶ ಸಿಗದೇ ಬೇಸೋತ್ತವರು ಇದ್ದಾರೆ.. ಅಂತವರಿಗೆಂದೇ ಇಲ್ಲಿದೆ ದಿ ಬೆಸ್ಟ್ ವೈಟ್ ಹೇರ್ ಮನೆಮದ್ದು..
ಈ ಭೂಮಿಯ ಮೇಲಿನ ಪ್ರತಿಯೊಂದು ಎಲೆಗೂ ಔಷಧೀಯ ಮೌಲ್ಯವಿದೆ. ಅದೇ ರೀತಿ ಪೇರಲ ಎಲೆಗಳು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಔಷಧಿಯಾಗಿಯೂ ಬಳಸುತ್ತಾರೆ. ಇದು ಕ್ಯಾನ್ಸರ್ ನಿಂದ ಹಿಡಿದು ಮಧುಮೇಹದವರೆಗೆ ಎಲ್ಲ ರೋಗವನ್ನೂ ಗುಣಪಡಿಸುತ್ತದೆ.
ಒಂದು ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೇ.. ಅನೇಕ ಪೋಷಕಾಂಶಗಳನ್ನು ಹೊಂದಿದೆ… ಪೇರಲ ಎಲೆಗಳು ವಿಟಮಿನ್ ಸಿ, ನೀರು, ಫೈಬರ್ನಂತಹ ಅನೇಕ ಖನಿಜಗಳಿಂದ ತುಂಬಿವೆ.
ಬಿಳಿ ಕೂದಲಿಗೆ ಪರಿಹಾರ ನೀಡುವುದಕ್ಕಾಗಿ ಪೇರಲ ಎಲೆ 5, ಕರಿಬೇವಿನ ಎಲೆಗಳು 20, ನೆಲ್ಲಿ 1, ತೆಂಗಿನ ಎಣ್ಣೆ 200 ಮಿಲಿ, ತೆಗೆದುಕೊಳ್ಳಿ.. ಮೊದಲು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದಕ್ಕೆ ಸಿದ್ಧ ಮಾಡಿಕೊಂಡ ಪದಾರ್ಥಗಳನ್ನು ಬೆರೆಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ ಆ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ..
ಈ ಮದ್ದು ನಿಮ್ಮ ಕೂದಲಿನ ಹೊಟ್ಟು, ಸೀಳು, ಉದುರುವಿಕೆಯಂಯಹ ಸಮಸ್ಯೆಗಳಿಂದ ಒಂದೇ ತಿಂಗಳಲ್ಲಿ ಮುಕ್ತಿ ನೀಡುತ್ತದೆ