ದೇಹದ ಬೇರೆ ಯಾವುದೇ ಭಾಗಗಳಿಗೆ ಹೋಲಿಸಿದರೆ ನಮ್ಮ ಕುತ್ತಿಗೆ ಭಾಗ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಬಿಸಿಲಿಗೆ ನಮ್ಮ ಚರ್ಮ ಈ ಭಾಗದಲ್ಲಿ ಹೆಚ್ಚು ಒಡ್ಡಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆ ಬರುತ್ತದೆ ಎಂದು ಒಂದು ಕಾರಣ ಹೇಳಬಹುದು. ಆದರೆ ನಾಲ್ಕಾರು ಜನರ ಮುಂದೆ ಇದು ಸ್ವಲ್ಪ ಮುಜುಗರ ತರಿಸುವ ವಿಷಯ.
ನಿಮ್ಮ ಕುತ್ತಿಗೆ ಭಾಗಕ್ಕೆ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂದು ನಾವು ನೋಡೋಣ!

- ಬಾದಾಮಿ ಎಣ್ಣೆಯಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇರುವ ವಿಟಮಿನ್ ಈ ಅಂಶ ಹೆಚ್ಚಾಗಿದೆ.
- ಇದು ನಿಮ್ಮ ತ್ವಚೆಯ ಭಾಗಕ್ಕೆ ತಾಜಾತನವನ್ನು ಒದಗಿಸಿ ತ್ವಚೆಯ ಭಾಗದಲ್ಲಿ ಎಣ್ಣೆಯ ಅಂಶ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವಂತೆ ನೋಡಿಕೊಂಡು ನಿಮ್ಮ ಚರ್ಮದ ಸೌಂದರ್ಯವನ್ನು ರಕ್ಷಣೆ ಮಾಡುತ್ತದೆ.
- ಮೊದಲು ನಿಮ್ಮ ಕುತ್ತಿಗೆಯ ಭಾಗವನ್ನು ನೀರಿನಿಂದ ಚೆನ್ನಾಗಿ ಸ್ವಚ್ಛ ಮಾಡಿಕೊಂಡು ತೇವಾಂಶವನ್ನು ಒಂದು ಒಣ ಕಾಟನ್ ಬಟ್ಟೆಯಲ್ಲಿ ಒತ್ತಿಕೊಂಡು ನಿಮ್ಮ ಕುತ್ತಿಗೆಯ ಭಾಗವನ್ನು ಬಾದಾಮಿ ಎಣ್ಣೆಯಿಂದ ಸುಮಾರು ಹತ್ತು ನಿಮಿಷಗಳ ಕಾಲ ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಿ.
- ಬೇಕಿಂಗ್ ಸೋಡಾ ಸಾಮಾನ್ಯವಾಗಿ ಸ್ವಚ್ಛತೆಗೆ ಹೆಸರಾಗಿರುವ ಒಂದು ಆಹಾರ ಪದಾರ್ಥ. ನಿಂಬೆ ಹಣ್ಣಿನ ಜೊತೆಗೆ ಇದರ ಮಿಶ್ರಣ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ.
- ನಿಮ್ಮ ತ್ವಚೆಯ ಭಾಗವನ್ನು ಧೂಳು ಮತ್ತು ಕೊಳೆಯ ಅಂಶದಿಂದ ಮುಕ್ತಿಗೊಳಿಸಿ ಚರ್ಮದ ಮೇಲ್ಭಾಗದಲ್ಲಿ ಕಂಡುಬರುವ ಸಣ್ಣಸಣ್ಣ ರಂಧ್ರಗಳನ್ನು ತೆರೆಯುವಂತೆ ಮಾಡಿ ತ್ವಚೆಯ ಭಾಗಕ್ಕೆ ಹೆಚ್ಚು ಗಾಳಿಯ ಸಂಪರ್ಕ ಇರುವಂತೆ ನೋಡಿಕೊಳ್ಳುತ್ತದೆ.
- ಇದರಿಂದ ಚರ್ಮದ ಮೇಲೆ ಕಂಡುಬರುವ ಸತ್ತ ಜೀವಕೋಶಗಳು ನಿವಾರಣೆಯಾಗಿ ನಿಮ್ಮ ತ್ವಚೆ ಹೆಚ್ಚು ತಾಜಾತನದಿಂದ ಕೂಡಿರಲು ಅನುಕೂಲವಾಗುತ್ತದೆ.
- ಆಲೂಗಡ್ಡೆಯಲ್ಲಿ ಬ್ಲೀಚಿಂಗ್ ಗುಣಲಕ್ಷಣಗಳು ಇರುವ ಕಾರಣ ಕಪ್ಪು ಬಣ್ಣದ ಚರ್ಮವನ್ನು ಹಗುರವಾದ ತಿಳಿ ಬಣ್ಣಕ್ಕೆ ತಿರುಗಿಸುವ ಲಕ್ಷಣ ಕಂಡುಬರುತ್ತದೆ.
- ಚರ್ಮದ ಮೇಲೆ ಕಂಡುಬರುವ ಸಣ್ಣ ಸಣ್ಣ ಕಪ್ಪು ಕಲೆಗಳು ಮತ್ತು ಚರ್ಮದ ದದ್ದುಗಳು ಸಹ ಇದರಿಂದ ಮಾಯವಾಗುತ್ತವೆ ಎಂದು ಹೇಳುತ್ತಾರೆ.

