ಈಜಿಪ್ಟ್: ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ನಿಖಾಬ್‌ಗೆ ಅವಕಾಶವಿಲ್ಲ. ಈ ಸಾಲಿಗೆ ಮತ್ತೊಂದು ಮುಸ್ಲಿಂ ರಾಷ್ಟ್ರ ಸೇರಿಕೊಂಡಿದೆ. ಇದೀಗ ಈಜಿಪ್ಟ್ ಸರ್ಕಾರ ಶಾಲೆಗಳಲ್ಲಿ ನಿಖಾಬ್ ನಿಷೇಧಿಸಿದೆ. ಮುಖ ಮುಚ್ಚಿಕೊಳ್ಳುವ ಬುರ್ಖಾ ರೀತಿಯ ನಿಖಾಭ್ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವ ರೆಡಾ ಹೆಗಾಝಿ ಆದೇಶ ಹೊರಡಿಸಿದ್ದಾರೆ.
ಈಜಿಪ್ಟ್ ಹೊರಡಿಸುವ ಹೊಸ ಆದೇಶದಲ್ಲಿ ಶಾಲೆಗಳಲ್ಲಿ ನಿಖಾಬ್ ಸಂಪೂರ್ಣ ನಿಷೇಧಿಸಲಾಗಿದೆ ಎಂದಿದೆ. ಇನ್ನು ಹಿಬಾಜ್ ಧರಿಸುವುದು ಅವರ ಇಚ್ಚಗೆ ಬಿಟ್ಟದ್ದು. ಯಾರೂ ಒತ್ತಾಯಪೂರ್ವಕವಾಗಿ ಹಿಜಾಬ್ ಧರಿಸುವಂತಿಲ್ಲ ಎಂದಿದೆ. ಮಕ್ಕಳು ಮುಖ ಮುಚ್ಚಿಕೊಂಡು ಶಾಲೆಗೆ ಬರುವಂತಿಲ್ಲ. ಶಾಲೆಯ ಸಮವಸ್ತ್ರದ ನಿಯಮ ಕುರಿತು ಪೋಷಕರು ಅರಿಯಬೇಕು. ಇನ್ನು ಹಿಜಾಬ್ ವಿಚಾರದಲ್ಲಿ ಪೋಷಕರು ಯಾವುದೇ ಒತ್ತಾಯ ಮಾಡುವಂತಿಲ್ಲ. ಶಾಲೆಗೆ ಹಿಜಾಬ್ ಧರಿಸುವುದರಿಂದ ಮಕ್ಕಳು ದೂರ ಉಳಿದರೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

Chinese Defence Minister: 2 ವಾರಗಳಿಂದ ಚೀನಾ ರಕ್ಷಣಾ ಸಚಿವ ನಿಗೂಢವಾಗಿ ನಾಪತ್ತೆ..!
ಶಾಲೆಗಳಲ್ಲಿ ಹುಡುಗ ಹಾಗೂ ಹುಡುಗಿಯರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಶಾಲೆ ಸೂಚಿಸುವ ಸಮವಸ್ತ್ರವನ್ನೇ ಧರಿಸಬೇಕು. ಸೆಪ್ಟೆಂಬರ್ 30 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ ಎಂದು ಶಿಕ್ಷಣ ಸಚಿವ ಹೇಳಿದ್ದಾರೆ.ಸೆಪ್ಟೆಂಬರ್ 30 ರಿಂದ ಈಜಿಪ್ಟ್‌ನಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಈ ದಿನದಿಂದಲೇ ಸಮವಸ್ತ್ರ ನಿಯಮ ಜಾರಿಗೆ ಬರಲಿದೆ ಎಂದಿದೆ.
ಹಿಜಾಬ್ ಧರಿಸುವುದಾದರೆ ಶಿಕ್ಷಣ ಇಲಾಖೆ ಸೂಚಿಸಿದ ಬಣ್ಣದಲ್ಲೇ ಇರಬೇಕು. ಈಜಿಪ್ಟ್ ಶಿಕ್ಷಣ ಇಲಾಖೆ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಇದರ ನಡುವೆ ಕೆಲ ಮೂಲಭೂತವಾದಿ ಗುಂಪುಗಳು ವಿರೋಧ ವ್ಯಕ್ತಪಡಿಸಿದೆ. ಇದು ಇಸ್ಲಾಂ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಆರೋಪಿಸಿದೆ.
