ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ತಾಲೂಕಿನ ಸೀಗಿಕೇರಿ, ಬೆನಕಟ್ಟಿ ಹಾಗೂ ಹೊನ್ನಾಕಟ್ಟಿ ಸೇರಿ ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆ, ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಪ್ರತಿ ರೈತರ ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ.
ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿಗೆ: ರೈತರು ಫುಲ್ ಖುಷ್!
ಕೈಗೆ ಬಂದ ತುತ್ತು ಬಾಯಿಗೆ ಬರದೇ ರೈತರು ಪರದಾಟ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ರೈತರನ್ನು ಕಂಗಾಲಾಗಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ತಾಲೂಕಿನ ಸೀಗಿಕೇರಿ, ಬೆನಕಟ್ಟಿ ಹಾಗೂ ಹೊನ್ನಾಕಟ್ಟಿ ಸೇರಿ ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆ, ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಪ್ರತಿ ರೈತರ ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ.